ಉತ್ತಮ ಮಾಯಿಶ್ಚರೈಸರ್ ಬಳಸಿ


ಉತ್ತಮ ಮಾಯಿಶ್ಚರೈಸರ್ ಬಳಸಿ

ಮುಖದ ಅಂದ ಹೆಚ್ಚಿಸುವಲ್ಲಿ ಸಾಮಾನ್ಯವಾಗಿ ಮನೆಯಲ್ಲೇ ಮಾಡುವ ಹಲವು ವಿಧಾನಗಳು ಹೆಚ್ಚು ಪ್ರಯೋಜನಕಾರಿ ಎಂದೇ ಹೇಳಬಹುದು, ಸಮಯದ ಕೊರತೆಯಿಂದ ಸಾಮಾನ್ಯವಾಗಿ ಕೆಲಸಕ್ಕೆ ಹೋಗುವ ಹೆಣ್ಣು ಮಕ್ಕಳು ಬ್ಯೂಟಿ ಪಾರ್ಲರ್ ಮೊರೆ ಹೋಗುತ್ತಾರೆ. ಇದರಿಂದ ಲಾಭವಂತೂ ಇಲ್ಲ, ದುಡ್ಡು ವ್ಯರ್ಥ. ಆದರೂ ಸಮಯ ಸಿಕ್ಕಾಗ ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿಕೊಂಡು ದೇಹದ ಕಾಂತಿ ಹೆಚ್ಚಿಸಕೊಳ್ಳಬಹುದು.

ತೆಂಗಿನೆಣ್ಣೆ : ಕೈಗಳಿಗೆ, ಮುಖಕ್ಕೆ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ನಿಧಾನವಾಗಿ ಮಸಾಜ್ ಮಾಡಬೇಕು. ಸ್ವಲ್ಪ ಹೊತ್ತಿನ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಬಟ್ಟೆಯನ್ನು ಅದ್ದಿ ಮುಖ, ಕೈಕಾಲು ದೇಹವನ್ನು ಒರೆಸಬೇಕು. ಎಣ್ಣೆ ದೇಹವನ್ನು ಸ್ವಚ್ಛಗೊಳಿಸುವುದರಿಂದ ದೇಹದಲ್ಲಿನ ಕಲ್ಮಶ ತೆಗೆದುಹಾಕುತ್ತದೆ. ಜತೆಗೆ ದೇಹಕ್ಕೆ ಕಾಂತಿ ಕೊಡುತ್ತದೆ.
ಫೇಸ್ ಸ್ಕ್ರಬ್: ಫೇಸ್ ಸ್ಕ್ರಬ್ ನಿಂದ ಮುಖವನ್ನು ನಿಧಾನವಾಗಿ ಉಜ್ಜಬೇಕು. ಹೆಚ್ಚು ಒತ್ತಡ ಹಾಕುವುದರಿಂದ ಚರ್ಮಕ್ಕೆ ಹಾನಿ ಉಂಟಾಗಬಹುದು. ಒಮ್ಮೆ ಹಾಗೆ ಮಾಡಿದ ನಂತರ ಬೆಚ್ಚಗಿನ ನೀರಿನಿಂದ ತೊಳೆಯಬೇಕು.
ಸ್ಟೀಮಿಂಗ್: ಸ್ಟೀಮಿಂಗ್ ಮಾಡುವುದರಿಂದ ನಿಮ್ಮ ಮುಖವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ, ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ನಿವಾರಣೆ ಮಾಡುತ್ತದೆ, ಒಣ ಚರ್ಮವನ್ನು ತಡೆಯುತ್ತದೆ.
ಒಂದು ಪಾತ್ರೆಯಲ್ಲಿ ನೀರು ತುಂಬಿ ಬಿಸಿ ಮಾಡಿ. ನೀರು ಕುದಿಯುವವರೆಗೆ ಕಾಯಿರಿ ಮತ್ತು ಹಬೆ ಬಂದ ಮೇಲೆ ಕಾದು, ಕನಿಷ್ಠ ಐದು ನಿಮಿಷಗಳ ಕಾಲ ಹಬೆಯನ್ನು ತೆಗೆದುಕೊಳ್ಳಬಹುದು.
ಮಾಯಿಶ್ಚರೈಸರ್ : ಇದು ಕೊನೆಯ ಹಂತವಾಗಿದ್ದು, ದೇಹಕ್ಕೆ ಹೊಂದುವ ಮಾಯಿಶ್ಚರೈಸರ್‍ನ್ನು ಆಯ್ಕೆ ಮಾಡಬೇಕು. ಎಣ್ಣೆಯ ಚರ್ಮಕ್ಕಾಗಿ ಜೆಲ್ ಆಧಾರಿತ ಮಾಯಿಶ್ಚರೈಸರ್ ಬಳಸುವುದರಿಂದ ಒಣ ಚರ್ಮವನ್ನು ಹೊಂದಿದ್ದರೆ, ಫೇಸ್ ಬಟರ್ ಅಥವಾ ದಪ್ಪನೆಯ ಲೋಷನ್ ಬಳಸಬಹುದು.