ಅಡುಗೆ ಸೋಡಾದಿಂದ ಮುಖದ ಕಾಂತಿ


ಅಡುಗೆ ಸೋಡಾದಿಂದ ಮುಖದ ಕಾಂತಿ

ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡಾ ಪ್ರತಿಯೊಬ್ಬರ ಮನೆಯ ಅಡುಗೆ ಮನೆಗಳಲ್ಲಿ ಇದ್ದೇ ಇರುತ್ತದೆ. ಇಡ್ಲಿ, ದೋಸೆ, ತಯಾರಿಕೆಗೆ ಬಳಸುತ್ತಾರೆ. ಎದೆಯುರಿ, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ದಂತಹ ಸಮಸ್ಯೆಗಳನ್ನು ತುಂಬಾ ಪರಿಣಾಮಕಾರಿಯಾಗಿ ನಿವಾರಣೆ ಮಾಡುತ್ತದೆ. ಇಷ್ಟೇ ಅಲ್ಲದೇ ತ್ವಚೆ ಹಾಗೂ ಕೂದಲಿನ ಆರೋಗ್ಯಕ್ಕೆ ಕೂಡಾ ಎಂದು ತಿಳಿದುಬಂದಿದೆ. ಹಾಗಾದರೇ ತ್ವಚೆಗೆ ಇದರಿಂದ ಏನೆಲ್ಲ ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳೋಣ.

ಒಂದು ಕಪ್ ತಣ್ಣೀರನ್ನು ತೆಗೆದುಕೊಂಡು ಅದಕ್ಕೆ ಬೇಕಿಂಗ್ ಸೋಡಾ ಹಾಕಿ ಮಿಶ್ರಣ ಮಾಡಬೇಕು. ನಂತರ ಸ್ವಚ್ಛವಾದ ಬಟ್ಟೆಯನ್ನು ತೆಗೆದುಕೊಂಡು ಇದರಲ್ಲಿ ಅದ್ದಿ ಚರ್ಮಕ್ಕೆ ಹಾನಿಯಾದ ಭಾಗಕ್ಕೆ ಇಟ್ಟುಕೊಳ್ಳುವುರಿಂದ ಚರ್ಮದ ಭಾಗಕ್ಕೆ ಹಚ್ಚುವುದರಿಂದ ಗಾಯ ವಾಸಿಯಾಗುವುದರ ಜತೆಗೆ ಚರ್ಮದ ಕಾಂತಿ ಹೆಚ್ಚುತ್ತದೆ. ದಿನದಲ್ಲಿ 2-3 ಬಾರಿ ಹೀಗೆ ಮಾಡುವುದರಿಂದ ಚರ್ಮದ ಸಮಸ್ಯೆಗೆ ಪರಿಹಾರ ದೊರಕುತ್ತದೆ.
ಸ್ನಾನ ಮಾಡುವ ಬಾತ್ ಟಬ್ ನೀರಿನಲ್ಲಿ ಅರ್ಧ ಕಪ್ ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸ್ನಾನ ಮಾಡುವುದರಿಂದ ಚರ್ಮದ ಏನೇ ಸಮಸ್ಯೆ ಇದ್ದರೂ ಶಮನವಾಗುತ್ತದೆ.
ರೋಸ್ ವಾಟರ್ ನಲ್ಲಿ ಬೇಕಿಂಗ್ ಸೋಡಾ ಮಿಶ್ರಣಮಾಡಿ ಪೇಸ್ಟ್ ತಯಾರು ಮಾಡಿಕೊಳ್ಳಬೇಕು ಇದನ್ನು ಮುಖಕ್ಕೆ ಹಚ್ಚಿ ಒಂದು ನಿಮಿಷದ ತನಕ ನಯವಾಗಿ ಹಚ್ಚಿ ಮಸಾಜ್ ಮಾಡಬೇಕು. ನಂತರ ಸ್ವಲ್ಪ ಹೊತ್ತು ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಬೇಕು. ವಾರದಲ್ಲಿ 1 ರಿಂದ 2 ಬಾರಿ ಈ ಪ್ರಕ್ರಿಯೆಯನ್ನು ಅನುಸರಿಸುವುದರಿಂದ ನಿಮ್ಮ ಮುಖದ ಸೌಂದರ್ಯ ಹೆಚ್ಚಾಗುತ್ತದೆ.
ಬೇಕಿಂಗ್ ಸೋಡಾ ವನ್ನು ನಿಂಬೆ ಹಣ್ಣಿನ ರಸದೊಂದಿಗೆ ಆಲಿವ್ ಆಯಿಲ್ ಮಿಶ್ರಣ ಮಾಡಿ ಮುಖದ ಮೇಲೆ ಹಚ್ಚುವುದರಿಂದ ಸೌಂದರ್ಯ ವೃದ್ಧಿ ಆಗುವುದರಲ್ಲಿ ಅನುಮಾನವಿಲ್ಲ.