ಪ್ರೀತಿ ಇದ್ದಲ್ಲಿ ವಯಸ್ಸಿನ ಹಂಗೆಲ್ಲಿ..?


ಪ್ರೀತಿ ಇದ್ದಲ್ಲಿ ವಯಸ್ಸಿನ ಹಂಗೆಲ್ಲಿ..?

ಗಂಡು ಹೆಣ್ಣಿನ ಸಂಬಂಧ ಏಳು ಜನುಮದ ಅನುಭಂದ ಅಂತೆಲ್ಲಾ ಹೇಳುತ್ತಾರೆ. ಆದ್ರೆ ಈಗ ಹಾಗಿಲ್ಲ. ಸರ್ಕಾರ ಗಂಡ ಹೆಂಡತಿಗಿಂತ ಮೂರು ವರ್ಷ ದೊಡ್ಡವನಿರಬೇಕು. ಅಂದರೆ ಗಂಡಿಗೆ 21 ಹೆಣ್ಣಿಗೆ 18 ಎಂದು ವಯಸ್ಸು ನಿಗಧಿ ಮಾಡಿದೆ. ಹಾಗದರೆ ಗಂಡನು ಹೆಂಡತಿಗಿಂತ ಸೀನಿಯರ್ ಆಗಿರಬೇಕೆ..? ಗಂಡ ಸಾಕಷ್ಟು ಸೀನಿಯರ್ ಆಗಿದ್ದ ಸಂಧರ್ಭದಲ್ಲಿ ದಾಂಪತ್ಯ ಸುಖಕರವಾಗಿರಲು ಸಾಧ್ಯನಾ..? ಸುಖ ದಾಂಪತ್ಯಕ್ಕೆ ವಯಸ್ಸಿನ ಮೀತಿಯ ಅವಶ್ಯಕತೆ ಇದೆಯಾ..? ಗಂಡ ಹೆಂಡತಿ ಸಮಾನ ವಯಸ್ಕರಾದರೆ ಮಾತ್ರ ಅವರಿಬ್ಬರು ಸಮಾನ ಮನಸ್ಕರಾಗಲು ಸಾಧ್ಯವೇ..? ಅಷ್ಟಕ್ಕೂ ದಾಂಪತ್ಯದ ಯಶಸ್ಸಿಗೂ ವಯಸ್ಸಿಗೂ ಸಂಬಂಧವಿದೆಯೇ..? ಎಂಬೆಲ್ಲಾ ಪ್ರಶ್ನೆಗಳು ಉದ್ಭವವಾಗುತ್ತವೆ.

ಈಗ ಹಾಗಿಲ್ಲ. ಐಟಿ- ಬಿಟಿ ಯುಗದಲ್ಲಿ ಹುಡುಗ 24ರ ಹೊತ್ತಿಗೇ ಕೈತುಂಬಾ ಸಂಬಳ ಪಡೆಯೋ ಹಂತ ಮುಟ್ಟುತ್ತಾನೆ. ಪರಿಣಾಮ ಮದುವೆಯೂ ಬೇಗ. ಇಂಥ ಸಂಬಂಧಗಳಲ್ಲಿ ಗಂಡ- ಹೆಂಡತಿ ಮಧ್ಯೆ ವಯಸ್ಸಿನ ಅಂತರ ಇಲ್ಲದಿರುವ ಪ್ರಮೇಯವೇ ಹೆಚ್ಚು. ಆಧುನಿಕ ಪೇರೆಂಟ್‍ಗಳು ಸಣ್ಣ ವಯಸ್ಸಿನ ಅಳಿಯನಿಗಾಗಿ ಸರ್ಚ್ ಮಾಡುವುದೇ ಅಧಿಕವಾಗಿರುವ ಕಾರಣ ಇದೂ ಕೂಡ ಪತಿ-ಪತ್ನಿ ಮಧ್ಯೆ ವಯಸ್ಸಿನ ಅಂತರವನ್ನು ಸಾಕಷ್ಟು ಕಡಿಮೆ ಮಾಡುತ್ತಿದೆ.
ಗಂಡ-ಹೆಂಡತಿ ಸಮಾನ ವಯಸ್ಕರಾಗಿದ್ದರೆ ಅವರು ಬೆಸ್ಟ್ ಫ್ರೆಂಡ್ಸ್ ಆಗಿರ್ತಾರೆ. ಅವರ ಅಭಿರುಚಿ, ಆಸಕ್ತಿ ಕೂಡ ಒಂದೇ ಥರ ಇರುತ್ತವೆ. ಹೀಗಾಗಿ ಇಂಥ ದಾಂಪತ್ಯ ಸಕ್ಸಸ್ ಆಗುತ್ತದೆ- ಇಂಥದೊಂದು ಟ್ರೆಂಡ್ ಈಗ ಹಬ್ಬುತ್ತಿದೆ. ಮತ್ತೊಂದು ಕಡೆ ಗಂಡನು ಹೆಂಡತಿಗಿಂತ 7-8 ವರ್ಷ ಸೀನಿಯರ್ ಆಗಿದ್ದರೆ, ಅಂಥ ದಾಂಪತ್ಯ ಚೆನ್ನಾಗಿರೋಲ್ಲ ಎನ್ನುವ ತಾಯ್ತಂದೆಗಳೂ ಈಗ ಹೆಚ್ಚಾಗುತ್ತಿದ್ದಾರೆ..