ಕೂದಲ ಬೆಳವಣಿಗೆಗೆ ತೆಂಗಿನೆಣ್ಣೆ ಬಳಸಿ


ಕೂದಲ ಬೆಳವಣಿಗೆಗೆ ತೆಂಗಿನೆಣ್ಣೆ ಬಳಸಿ

ಥೋ ತಲೆ ಕೂದಲು ಎಷ್ಟು ಉದುರುತ್ತಪ್ಪಾ ಯಾವ ಎಣ್ಣೆ ಹಾಕಿದ್ರೂ ಕೂದಲು ಉದುರೋದು ಕಡಿಮೆನೇ ಆಗಿಲ್ಲ ಹೇಗಪ್ಪಾ ಕೂದಲ ರಕ್ಷಣೆ ಮಾಡೋದು ಅಂತಾ ಯೋಚಿಸುವವರಿಗೆ ತೆಂಗಿನೆಣ್ಣೆ ಬೆಸ್ಟ್ ಪರಿಹಾರ ಹಾಗಾದರೆ ತೆಂಗಿನೆಣ್ಣೆಯಿಂದ ಕೂದಲ ಸದೃಢತೆ ಹೇಗೆ ಎಂದು ತಿಳಿದುಕೊಳ್ಳೋಣ. ರಾತ್ರಿ ಮಲಗುವಾಗ ತೆಂಗಿನೆಣ್ಣೆ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಿಕೊಂಡರೆ ಕೂದಲು ಉದುರೋದು ಕಡಿಮೆಯಾಗೋದರ ಜತೆಗೆ ಕೂದಲ ಬೆಳವಣಿಗೆಯಾಗುತ್ತದೆ.

ಯಾವುದೋ ಜಾಹೀರಾತಿಗೆ ಮರುಳಾಗಿ ಪದೇ ಪದೇ ಶ್ಯಾಂಪು ಬದಲಾಯಿಸೋದು ಬೇಡ. ಕೂದಲಿಗೆ ಹೊಂದುವ ಸೌಮ್ಯವಾದ ಶ್ಯಾಂಪು ಬಳಸಿದರೆ ಒಳ್ಳೆಯದು. ಕಂಡಿಷನರ್ ಬಳಕೆ ಸ್ವಲ್ಪ ಕಡಿಮೆ ಮಾಡಿದರೆ ಒಳ್ಳೆಯದು . ಒಂದು ಬೋಗುಣಿಯಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆ ಬೆಚ್ಚಗಾಗಿಸಿಕೊಂಡು ಅದನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿಗೆ ಹೊಳಪು ಬರುವುದರ ಜತೆಗೆ ಕೂದಲಿಗೆ ಶಕ್ತಿ ಬರುತ್ತದೆ.

ಕೂದಲನ್ನು ಹರಡಿಕೊಂಡು ಎಣ್ಣೆಯನ್ನು ಕೂದಲ ಬುಡದಿಂದ ಪ್ರಾರಂಭಿಸಿ ತುದಿಯವರೆಗೂ ಹಚ್ಚಿಕೊಂಡು ಬಂದರೆ ಒಳ್ಳೆಯದು. ನಂತರ ಅಗಲ ಬಾಚಣಿಗೆ ಬಳಸಿಕೊಂಡು ಬಾಚಬೇಕು, ಸಿಕ್ಕಾಗಿದ್ದರೆ ನಿಧಾನವಾಗಿ ಕೈಯಿಂದ ಬಿಡಿಸಬೇಕು. ಸಮಯವಿಲ್ಲವೆಂದು ಬೇಗ ಬೇಗ ಬಾಚುವುದರಿಂದ ಕೂದಲಿಗೆ ಹಾನಿಯಾಗುತ್ತದೆ. ಒಂದು ಬೋಗುಣಿಯಲ್ಲಿ ಕೊಬ್ಬರಿ ಎಣ್ಣೆ ಮತ್ತು ಲೋಳೆರಸವನ್ನು ಚೆನ್ನಾಗಿ ಬೆರೆಸಬೇಕು.

ನಂತರ ಈ ಮಿಶ್ರಣವನ್ನು ತಲೆಹೊಟ್ಟಿರುವ ಭಾಗಕ್ಕೆಲ್ಲಾ ಚೆನ್ನಾಗಿ ಹಚ್ಚಿಕೊಂಡು ಸುಮಾರು ಒಂದು ಘಂಟೆ ಹಾಗೇ ಬಿಡಬೇಕು. ಕೊಬ್ಬರಿ ಎಣ್ಣೆ ನೈಸರ್ಗಿಕ ಕಂಡೀಶನರ್ ಸಹಾ ಆಗಿದೆ ಹಾಗೂ ಇದು ಕೂದಲನ್ನು ಮೃದು ಮತ್ತು ಹೊಳಪಿನಿಂದ ಇರಿಸಲು ನೆರವಾಗುತ್ತದೆ. ನೆತ್ತಿಯ ಭಾಗವನ್ನು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವ ಮೂಲಕ ನೆತ್ತಿಯ ಚರ್ಮದ ಭಾಗದಲ್ಲಿ ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ. ಈ ಮೂಲಕ ಕೊಬ್ಬರಿ ಎಣ್ಣೆಯ ಪೋಷಕಾಂಶಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕೂದಲ ಬುಡಗಳಿಗೆ ತಲುಪಲು ಸಾಧ್ಯವಾಗುತ್ತದೆ ಹೀಗೆ ಮಾಡುವುದರಿಂದ ಕೂದಲ ಆರೈಕೆ ಚೆನ್ನಾಗಿ ಮಡಬಹುದು.