ಆಭರಣದ ಆಯ್ಕೆ ಸರಿಯಾಗಿರಲಿ


ಆಭರಣದ ಆಯ್ಕೆ ಸರಿಯಾಗಿರಲಿ

ಹೆಣ್ಣು ಮಕ್ಕಳು ಸಾಮಾನ್ಯವಾಗಿ ತಮ್ಮ ಅಲಂಕಾರಕ್ಕೆ ಮೇಕಪ್ ಹೇಗಿರಬೇಕು ಎಂಬ ಪ್ಲಾನ್ ಜತೆಗೆ ಧರಿಸುವ ದಿರಿಸಿನ ಬಗ್ಗೆ, ಆಭರಣದ ಬಗ್ಗೆ ಚಿಂತೆ ಮಾಡುತ್ತಾರೆ. ಕೆಲವೊಮ್ಮ ತಮಗೆ ಸೂಕ್ತವಾದ ಡ್ರೆಸ್, ಆಭರಣಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಸೋತು ಬಿಡುತ್ತಾರೆ. ಹಾಗಾಗಿ ಅದರಿಂದ ಅನೇಕ ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವರಿಗೆ ಚಿನ್ನ ಧರಿಸಿದರೆ ಚರ್ಮದ ಸಮಸ್ಯೆ ಉಂಟಾಗುತ್ತದೆ, ಇನ್ನೂ ಕೆಲವರಿಗೆ ಬೆಳ್ಳಿ ಧರಿಸಿದರೆ ಆಗುವುದಿಲ್ಲ ಹೀಗೆಲ್ಲ ಸಮಸ್ಯೆಗಳಿಂದ ಹೆಣ್ಣು ಮಕ್ಕಳು ಪರದಾಡುತ್ತಿರುತ್ತಾರೆ.
ಹೌದು, ಕೆಲವು ಮಹಿಳೆಯರಿಗೆ ಕೆಲವು ಆಭರಣಗಳನ್ನು ಧರಿಸುವುದರಿಂದ ಉರಿಯೂತ, ಕೆಂಪುಗುಳ್ಳೆಗಳು ಕಾಣಿಸಿಕೊಳ್ಳುತ್ತವೆ, ಅದರ ಜತೆಗೆ ತುರಿಕೆ , ಒಣ ಕಲೆ, ಕೀವು ತುಂಬಿಕೊಳ್ಳುವುದು ಸೇರಿದಂತೆ ಇನ್ನಿತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ ದೇಹಕ್ಕೆ ತೆಂಗಿನೆಣ್ಣೆ ಹಚ್ಚಿ ಮಸಾಜ್ ಮಾಡಬಹುದು ಅಥವಾ ಮೊಸರು ಹಚ್ಚಿಕೊಳ್ಳಬಹುದು.

ಚರ್ಮದ ಮೇಲೆ ಉಂಟಾದ ಅಲರ್ಜಿಯ ಭಾಗಕ್ಕೆ ಮಾಯಿಶ್ಚರೈಸರ್, ಲೋಷನ್ ಹಚ್ಚಬೇಕು. ಅಲೋವೆರಾ ಕೂಡಾ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಬೆಸ್ಟ್ ಮದ್ದಾಗಿದೆ, ಸಮೃದ್ಧವಾದ ಔಷಧೀಯ ಗುಣ ಹೊಂದಿರುವ ಇದನ್ನು ಅಲರ್ಜಿ ಸಮಸ್ಯೆಗೆ ಬಳಸಬಹುದು. ಇದು ಚರ್ಮದಲ್ಲಿ ಉಂಟಾಗುವ ಅಲರ್ಜಿ, ಗಾಯ ಸಮಸ್ಯೆಯನ್ನು ಗುಣ ಪಡಿಸುತ್ತದೆ. ಹೀಗಾಗಿ ನಮ್ಮ ದೇಹಕ್ಕೆ ಸೂಕ್ತವಾಗುವ ಆಭರಣಗಳನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯದು.
ಯಾವ ಆಭರಣ ಧರಿಸುವುದರಿಂದ ನಿಮಗೆ ಚರ್ಮದಲ್ಲಿ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿದುಕೊಂಡು ಉಂಗುರಗಳು, ನೆಕ್‍ಲೇಸ್, ಕಡಗ, ಆಭರಣ ಯಾವುದು ಧರಿಸುವುದರಿಂದ ಅಲರ್ಜಿ ಆಗುತ್ತದೆ ಎಂದು ಮೊದಲು ಗುರುತಿಸಬೇಕು. ನಂತರ ಆಭರಣಗಳ ಬದಲಿಗೆ ಚಿನ್ನ, ಬೆಳ್ಳಿ, ಪ್ಲಾಸ್ಟಿಕ್ ಚರ್ಮದಿಂದ ಮಾಡಿದ ವಸ್ತುಗಳನ್ನು ಬಳಸಬೇಕು.