ನಮ್ಮ ದುರ್ಗ ನಮ್ಮ ಹೆಮ್ಮೆ; ಏಳು ಸುತ್ತಿನ ಕಲ್ಲಿನ ಕೋಟೆ ಇದು


ನಮ್ಮ ದುರ್ಗ ನಮ್ಮ ಹೆಮ್ಮೆ; ಏಳು ಸುತ್ತಿನ ಕಲ್ಲಿನ ಕೋಟೆ ಇದು

ಈ ಕೋಟೆಯನ್ನು ಕಲ್ಲಿನ ಕೋಟೆ, ಉಕ್ಕಿನ ಕೋಟೆ ಹಾಗೂ ಏಳು ಸುತ್ತಿನ ಕೋಟೆ ಎಂದು ಕರೆಯುತ್ತಾರೆ. ಸುಮಾರು 1500 ಎಕರೆ ವಿಸ್ತೀರ್ಣವನ್ನು ಹೊಂದಿರುವ ಇಲ್ಲಿ ಎಲ್ಲೆಡೆಯೂ ಇತಿಹಾಸವನ್ನು ಕಾಣಬಹುದು. ಇದು ಮತ್ಯಾವದು ಅಲ್ಲ ನಮ್ಮ ಕರ್ನಾಟಕದ ಹೆಮ್ಮೆಯ ಚಿತ್ರದುರ್ಗ ಕೋಟೆ. ಅಜೇಯವಾಗಿ, ಅನೇಕ ಯುದ್ಧಗಳನ್ನು ಮತ್ತು ಅನೇಕ ಆಡಳಿತಗಾರರನ್ನು ಹೊಂದಿದ್ದ ಚಿತ್ರದುರ್ಗ ಕೋಟೆಯು ಕಳೆದುಹೋದ ಒಂದು ಯುಗದ ಇತಿಹಾಸಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಈಗ ಉಳಿದದ್ದು ಖಂಡಿತವಾಗಿಯೂ ಒಮ್ಮೆ ಭೇಟಿ ನೀಡಿ ನೋಡಲೇಬೇಕಾದ ದೃಶ್ಯ ಕಾವ್ಯ.. ಅದ್ಭುತ ವೈಭವ.

ಇಲ್ಲಿ ಪ್ರತಿಯೊಂದಕ್ಕೂ ಶ್ರೀಮಂತ ಇತಿಹಾಸವಿದೆ ಮತ್ತು ಇದರ ಅನುಭವ ಅಸಾಧಾರಣವಾಗಿದೆ. ಮೊದಲು ಚಿತ್ರದುರ್ಗವನ್ನು ಚಿತ್ರದುರ್ಗ್, ಚಿತ್ತಾಲ್ ದುರ್ಗ್ ಎಂದು ಕರೆಯಲಾಗುತ್ತಿತ್ತು. ಬ್ರಿಟೀಷರ ಆಳ್ವಿಕೆಯ ಸಮಯದಲ್ಲಿ ಚಿತ್ತಾಲ್ ದುರ್ಗ್ ಎಂದು ಕರೆಯುತ್ತಿದ್ದರು. ಇಲ್ಲಿನ ಪ್ರವಾಸ ಸ್ಥಳಗಳು. ಚಿತ್ರದುರ್ಗದ ಕೋಟೆ, ವಾಣಿ ವಿಲಾಸ ಸಾಗರ ಅಣೆಕಟ್ಟು ಇದನ್ನು ಸ್ಥಳೀಯರು ಮಾರಿ ಕಣಿವೆ ಡ್ಯಾಮ್ ಎಂದು ಕೂಡ ಕರೆಯುತ್ತಾರೆ.

ಚಂದ್ರವಳ್ಳಿ ತೋಟ, ಜೋಗಿಮಟ್ಟಿ, ಕಲ್ಲಿನಕೋಟೆ, ಗಾಯತ್ರಿ ಜಲಾಶಯ, ಇತ್ಯಾದಿ.. ಚಿತ್ರದುರ್ಗದ ಕೋಟೆಯು ಹದಿನೆಂಟನೇ ಶತಮಾನಕ್ಕೆ ಸೇರಿದೆ. ಈ ಕೋಟೆಯನ್ನು ಕಟ್ಟಿದವರು ಚಿತ್ರದುರ್ಗದ ನಾಯಕರು. ಕೋಟೆಯನ್ನು ಕಟ್ಟಲು ರಾಷ್ಟ್ರಕೂಟರು, ಚಾಲುಕ್ಯರು ಹಾಗು ನಾಯಕರು ಸಹಾಯ ಮಾಡಿದ್ದಾರೆ. ನಾಯಕರು ಮುಖ್ಯವಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ನಂತರ ಹೈದರಾಲಿ ಹಾಗು ಅವನ ಮಗ ಟಿಪ್ಪು ಸುಲ್ತಾನ ಕೋಟೆಯ ಆಳ್ವಿಕೆಯನ್ನು ನಡೆಸುತ್ತಿದ್ದರು. ಈ ಕೋಟೆಯನ್ನು ಏಳು ಗೋಡೆಗಳ ನಡುವೆ ಕಟ್ಟಲಾಗಿದೆ.

ಈ ಕೋಟೆಯಲ್ಲಿ ನಡೆದ ಮುಖ್ಯವಾದ ಘಟನೆ ಕೆಚ್ಚೆದೆಯ ಮಹಿಳೆಯಾದ ಓಬವ್ವನ ಸಾಹಸ.. ಇವಳು ದಿಟ್ಟ ಮಹಿಳಾ ದೇಶಪ್ರೇಮಿ ಯಾಗಿದ್ದಳು. ಒಂದು ದಿನ ಸೈನಿಕ ಮದ್ದ ಹನುಮಪ್ಪ ಊಟ ಮಾಡುತ್ತಿದ್ದಾಗ, ಆ ಸೈನಿಕನ ಹೆಂಡತಿಯಾದ ಓಬವ್ವ ಗೋಪುರವನ್ನು ಕಾವಲು ಕಾಯುತ್ತಿದ್ದಳು. ಅವಳು ಕೋಟೆಯಲ್ಲಿ ಬಿರುಕು ಬಿಟ್ಟಿರುವ ಸ್ಥಳದಲ್ಲಿ ಕಾವಲು ಕಾಯುತ್ತಿದ್ದಳು. ಇಲ್ಲಿ ಒಬ್ಬರು ಮಾತ್ರ ರಹಸ್ಯವಾಗಿ ಬರುವಷ್ಟು ಸ್ಥಳವಿತ್ತು.

ಆಗ ನಡೆದ ಇವಳ ಸಾಹಸ ಇಂದು ಒಂದು ಇತಿಹಾಸವಾಗಿ ಜನರ ಮನಸೆಳೆದಿದೆ. ಕೆಲವು ಶತ್ರು ಸೈನಿಕರ ಕೆಳ ಧ್ವನಿಯಲ್ಲಿ ಮಾತಾಡುತ್ತಿರುವುದು ಓಬವ್ವಳಿಗೆ ಕೇಳಿಸಿತು. ಇದನ್ನು ಅರಿತ ಅವಳು ತಕ್ಷಣ ರಹಸ್ಯ ದಾರಿಯಿಂದ ಯಾರಿಗೂ ಕಾಣದ ಹಾಗೆ ಮರೆಯಾದಳು, ಮರೆಯಾಗಿ ಒಂದು ಒನಕೆಯನ್ನು ಕೈಯಲ್ಲಿ ಹಿದಿದು ನಿಂತಳು ವೈರಿಗಳ ರುಂಡವನ್ನು ಚಂಡಾಡಿದಳು. ಕಹಳೆ ಊದಿ ಸೈನ್ಯವನ್ನು ಸ್ಥಳಕ್ಕೆ ಕರೆಸಿದಳು. ಶತ್ರು ಪಡೆಯನ್ನು ಹಿಮ್ಮೆಟ್ಟಿಸಿದಳು.. ಆದರೆ ಅದೇ ಸಮಯದಲ್ಲಿ ವೈರಿಗಳ ಖಡ್ಗಕ್ಕೆ ಬಲಿಯಾದಳು ವೀರ ಮಹಿಳೆ ಓಬವ್ವ.. ದುರ್ಗ ಅಷ್ಟೇ ಯಾಕೆ ನಮ್ಮ ದೇಶವೇ ಮರೆಯದ ಓಬವ್ವ.