ಚಳಿಗಾಲದಲ್ಲಿ ನಿಮ್ಮ ಚರ್ಮದ ಕಾಳಜಿ ಹೀಗಿರಲಿ


ಚಳಿಗಾಲದಲ್ಲಿ ನಿಮ್ಮ ಚರ್ಮದ ಕಾಳಜಿ ಹೀಗಿರಲಿ

ಚಳಿಗಾಲದ ಗಾಳಿಗೆ ಸ್ಕಿನ್ ಡ್ರೈ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತೆ. ಚರ್ಮದ ಮೇಲಿನ ಪದರದ ತೇವಾಂಶವನ್ನು ಹೀರಿಕೊಳೋದರಿಂದ ತ್ವಚೆ ಡ್ರೈ ಆಗುತ್ತದೆ. ಇದರಿಂದ ನಮ್ಮ ತ್ವಚೆಯನ್ನು ಯಾವ ರೀತಿ ಕಾಳಜಿವಹಿಸಬೇಕು..? ಅನ್ನೋರು ಈ ಟಿಪ್ಸ್ ಪಾಲಿಸೋದರಿಂದ ಚರ್ಮದ ಸಮಸ್ಯೆ ನಿವಾರಣೆಯಗುತ್ತೆ. ದಿನಕ್ಕೆ ನೀವು 2 ಬಾರಿಯಾದರು ತ್ವಚೆಯನ್ನು ಸ್ವಚ್ಚಗೊಳಿಸಬೇಕು.

ಒಣ ಚರ್ಮದವರು ಆಗಾಗ  ನಿಮ್ಮ ತ್ವಚೆಯನ್ನು ಸ್ವಚ್ಚ ಮಾಡವುದರಿಂದ ಒಣ ತ್ವಚೆ ಸಮಸ್ಯೆ ದೂರಾಗುವುದು. ಅಲ್ಲದೇ ಹೆಚ್ಚು ರಾಸಾಯನಿಕ ಲೋಷನ್ ಅಥವಾ ಮಾಯಿಶ್ಚರೈಸರ್‍ನ್ನು ಹೆಚ್ಚಾಗಿ ಬಳಸಬೇಡಿ. ಅದರಿಂದ ಸ್ಕಿನ್ ಅಲರ್ಜಿಗಳು ಕಾಣಿಸಿಕೊಳ್ಳಬಹುದು.

ತುಂಬಾ ಬಿಸಿ ಇರುವ ನೀರನ್ನು ನಿಮ್ಮ ಚರ್ಮಕ್ಕೆ ಬಳಸಬೇಡಿ ಏಕಂದರೆ  ಬಿಸಿ   ನೀರನ್ನು ಬಳಸಿದರೆ ಚರ್ಮದ ತೇವಾಂಶ ನಿವಾರಣೆಯಾಗಿ ಚರ್ಮ ಮತ್ತಷ್ಟು ಡ್ರೈ ಆಗುವ ಸಾಧ್ಯತೆಯಿದೆ. ಹಾಗೇ ಮುಖವನ್ನು ನೀರಿನಿಂದ ತೊಳೆದ ಬಳಿಕ ಟವೆಲ್ ನಿಂದ ಒರೆಸಿಕೊಳ್ಳದೇ ನೀರು ಹಾಗೇ ಒಣಗಲು ಬಿಡಿ.

ಇದು ತೇವಾಂಶವನ್ನು ಲಾಕ್ ಮಾಡಲು ಸಹಕಾರಿಯಾಗುತ್ತೆ. ಸಾಕಷ್ಟು ನೀರನ್ನು ಕುಡಿಯಿರಿ. ಇದರಿಂದ ಚರ್ಮಕ್ಕೆ ಅಗತ್ಯವಾದ ಪೋಷಕಾಂಶ ಸಿಗುತ್ತದೆ. ಹಾಗೇ ಟೊಮೆಟೊ, ಸೌತೆಕಾಯಿ, ಕಿತ್ತಳೆ, ಅನಾನಸ್ ಮುಂತಾದ ನೀರಿನಾಂಶ ಹೆಚ್ಚಾಗಿರುವ ಹಣ್ಣುಗಳನ್ನು ತರಕಾರಿಗಳನ್ನು ಸೆವಿಸಿ.