ಅಕ್ಕಿ ಕೇಳಿದ್ದಕ್ಕೆ ಸಾಯೋದು ಒಳ್ಳೆಯದು ಎಂದ ಸಚಿವ


ಅಕ್ಕಿ ಕೇಳಿದ್ದಕ್ಕೆ ಸಾಯೋದು ಒಳ್ಳೆಯದು ಎಂದ ಸಚಿವ

ಬೆಳಗಾವಿ: ಸರ್ಕಾರದಿಂದ ಕೊಡುತ್ತಿದ್ದಂತ ರೇಷನ್ ಅಕ್ಕಿ ಕಡಿತ ಮಾಡೋದು ಸರಿಯಲ್ಲ. ಕಡಿತ ಮಾಡ್ಬೇಡಿ. ಲಾಕ್ ಡೌನ್ ಬೇರೆ ಇದೆ. ಅಲ್ಲಿಯವರೆಗೆ ಉಪವಾಸದಿಂದ ಸಾಯೋದ ಎಂದಿದ್ದಕ್ಕೆ, ಸಚಿವ ಉಮೇಶ್ ಕತ್ತಿ, ಸಾಯೋದು ಒಳ್ಳೆಯದು. ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದಿರೋ ಉಡಾಫೆಯ ಮಾತುಗಳು ಈಗ ವೈರಲ್ ಆಗಿದೆ.
ಗದಗ ಜಿಲ್ಲೆಯ ಕುರ್ತಕೋಟೆ ಗ್ರಾಮದ ಕಾರ್ಯಕರ್ತ ಈಶ್ವರ ಆರ್ಯ ಹಾಗೂ ಸಚಿವ ಉಮೇಶ್ ಕತ್ತಿ ಮಾತನಾಡಿರುವಂತ ಸಂಭಾಷಣೆ ಎಂದು ಹೇಳಲಾಗುತ್ತಿದೆ.