ತೆರಿಗೆ ಹಣ ಜನರಿಗಾಗಿ ಬಳಸಬೇಕು


ತೆರಿಗೆ ಹಣ ಜನರಿಗಾಗಿ ಬಳಸಬೇಕು

ಬೆಂಗಳೂರು: ಸರ್ಕಾರ ಕೋವಿಡ್? ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅಭಿವೃದ್ಧಿ ಕೆಲಸ ನಿಲ್ಲಿಸಲಿ. ಅನಗತ್ಯ ಖರ್ಚಿಗೆ ಬ್ರೇಕ್ ಹಾಕಲಿ. ನಾನು 5 ವರ್ಷ ಸಿಎಂ ಆಗಿದ್ದಾಗ ಒರ್ವ ರಾಜಕೀಯ ಕಾರ್ಯದರ್ಶಿಯೂ ಇರಲಿಲ್ಲ. ಆದರೆ ಈಗ ಅನಗತ್ಯ ಹುದ್ದೆ ಸೃಷ್ಟಿ ಮಾಡಿಕೊಂಡಿದ್ದಾರೆ. ಅವುಗಳನ್ನು ರದ್ದುಪಡಿಸಬೇಕು. ತಿಂಗಳಿಗೆ ಒಬ್ಬರಿಗೆ 10 ಕೆಜಿ ಅಕ್ಕಿ ಕೊಡಬೇಕು. ಇಂತಹ ಸಮಯದಲ್ಲಿ ತೆರಿಗೆ ಹಣ ಜನರಿಗಾಗಿ ಬಳಸಬೇಕು. ಬಿಪಿಎಲ್ ಕಾರ್ಡ್‍ದಾರರಿಗೆ ಸರ್ಕಾರ ಹಣ ನೀಡಬೇಕು. ಜೇಬಿನಲ್ಲಿ ಹಣವಿದ್ದರೆ ಅಗತ್ಯ ವಸ್ತುಗಳ ಖರೀದಿ ಮಾಡಬಹುದು. ಇಲ್ಲದಿದ್ದರೆ ಜನರು ಹೇಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಾರೆ.? ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.