ಲಾಕ್ ಡೌನ್; ಕುಸಿದು ಬಿತ್ತು ಕೃಷಿ ಉತ್ಪನ್ನಗಳ ಬೆಲೆ


ಲಾಕ್ ಡೌನ್; ಕುಸಿದು ಬಿತ್ತು ಕೃಷಿ ಉತ್ಪನ್ನಗಳ ಬೆಲೆ

ಕೋಲಾರ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ತೀವ್ರವಾಗಿ ವ್ಯಾಪಿಸುತ್ತಿದ್ದು, ಕೊರೊನಾ ಸೋಂಕಿತರು ಸಂಖ್ಯಯೂ ಹೆಚ್ಚಾಗುತ್ತಲಿದೆ. ಇದರ ಮಧ್ಯೆ ಆಕ್ಸಿಜನ್ ಸಿಗದೆ ಜನರು ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ 14 ದಿನಗಳ ಕಾಲ ರಾಜ್ಯದಲ್ಲಿ ಲಾಕ್?ಡೌನ್ ಜಾರಿ ಮಾಡಿದೆ. ಆದರೆ ಸರ್ಕಾರದ ಈ ನಿರ್ಧಾರದಿಂದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದು, ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಸಿಗದಂತಹ ಹಿನ್ನೆಲೆಯಲ್ಲಿ ಬೆಳೆಯನ್ನು ಎಪಿಎಂಸಿ ಮಾರುಕಟ್ಟೆ ಹಾಗೂ ತೋಟಗಳಲ್ಲಿಯೇ ಬೆಳೆಯನ್ನು ಬಿಡುತ್ತಿರುವುದು ಕಂಡುಬಂದಿದೆ.