ನಿಮ್ಮ ರಕ್ತದಲ್ಲೇ ಮುಸಲ್ಮಾನರ ಪರ, ಹಿಂದೂ ವಿರೋಧವಿದೆ


ನಿಮ್ಮ ರಕ್ತದಲ್ಲೇ ಮುಸಲ್ಮಾನರ ಪರ, ಹಿಂದೂ ವಿರೋಧವಿದೆ

ಶಿವಮೊಗ್ಗ: ಜಮೀರ್ ಅವರೇ ನೀವು ಮುಸಲ್ಮಾನರ ಪರವಾಗಿಯೇ ಇರಿ, ಆದರೆ ಹಿಂದೂಗಳ ಮತ ಪಡೆದು ಗೆದ್ದಿದ್ದೀರಿ, ಹಿಂದೂಗಳ ಅನ್ನವನ್ನು ತಿಂದಿದ್ದೀರಾ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದು ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಮೀರ್ ಅಹಮದ್ ಅವರೇ ನಿಮ್ಮ ರಕ್ತದಲ್ಲೇ ಮುಸಲ್ಮಾನರ ಪರ, ಹಿಂದೂ ವಿರೋಧವಿದೆ. ಮುಸಲ್ಮಾನರನ್ನು ಎತ್ತಿ ಕಟ್ಟುವುದು, ಬಾಯಿಗೆ ಬಂದ ಹಾಗೆ ಮಾತನಾಡುವುದು ಬಿಟ್ಟರೆ ನಿಮಗೆ ಬೇರೆ ಉದ್ಯೋಗವೇ ಇಲ್ಲ, ಜಮೀರ್ ಅಹಮದ್ ಮುಸಲ್ಮಾನ್ ನಾಯಕರು ಎಂದು ಆಗೊಮ್ಮ- ಈಗೊಮ್ಮೆ ಹೊರಟು ಬಿಡುತ್ತಾರೆ. ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಆದಾಗ ಇವನೇ ನಾಯಜತ್ವ ವಹಿಸಿಕೊಂಡಿದ್ದ, ಈ ಬಗ್ಗೆ ಅವರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರೇ ನೇರವಾಗಿ ಆರೋಪ ಮಾಡಿದ್ದರು. ಅದಕ್ಕೆ ಮೊದಲು ಉತ್ತರ ಕೊಡಲಿ ಎಂದರು.

ಇನ್ನೂ ತೇಜಸ್ವಿ ಸೂರ್ಯ ಬಗ್ಗೆ ಅವರು ಆಡಿರುವ ಮಾತುಗಳನ್ನು ನೋಡಿದೆ. ನಾನು ಅಂತಹ ಪದಗಳನ್ನು ಬಳಸುವುದಕ್ಕೆ ಇಷ್ಟಪಡುವುದಿಲ್ಲ. ಡಿಕೆ ಶಿವಕುಮಾರ್, ಜಮೀರ್ ಅವರೇ ನೀವು ಮುಸಲ್ಮಾನರ ಪರವಾಗಿಯೇ ಇರಿ, ಆದರೆ ಹಿಂದೂಗಳ ಮತ ಪಡೆದು ಗೆದ್ದಿದ್ದೀರಿ, ಹಿಂದೂಗಳ ಅನ್ನವನ್ನು ತಿಂದಿದ್ದೀರಾ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದು ಕಿಡಿಕಾರಿದ್ದಾರೆ.