ಬೆಂಗಳೂರಿನಲ್ಲಿ ಇಳಿಕೆ ಕಂಡ ಕೊರೋನಾ


ಬೆಂಗಳೂರು: ಬೆಂಗಳೂರಿನಲ್ಲಿ ಕೊರೋನಾ ಕೊಂಚ ನಿಯಂತ್ರಣಕ್ಕೆ ಬರುತ್ತಿದ್ದು, ಕಳೆದ 24 ಗಂಟೆಯಲ್ಲಿ ಹೊಸದಾಗಿ 4,046 ಪ್ರಕರಣಗಳು ದಾಖಲಾಗಿವೆ. ಬೊಮ್ಮನಹಳ್ಳಿ 411, ದಾಸರಹಳ್ಳಿ 120, ಬೆಂಗಳೂರು ಪೂರ್ವ 448, ಮಹಾದೇವಪುರ 703, ಆರ್‌.ಆರ್ ನಗರ 348, ಬೆಂಗಳೂರು ದಕ್ಷಿಣ 291, ಬೆಂಗಳೂರು ಪಶ್ಚಿಮ 349, ಯಲಹಂಕದಲ್ಲಿ 354 ಜನರಿಗೆ ಸೋಂಕು ತಗುಲಿದೆ. ನಿನ್ನೆ ನಗರದಲ್ಲಿ 4,734 ಪಾಟಿಸಿವ್ ಪ್ರಕರಣಗಳು ಪತ್ತೆಯಾಗಿತ್ತು. 213 ಮಂದಿ ಮೃತಪಟ್ಟಿದ್ದರು. ಸದ್ಯ 1,62,625 ಸಕ್ರಿಯ ಪ್ರಕರಣಗಳಿವೆ. ಪ್ರಸ್ತುತ ನಗರದ ಪಾಸಿಟಿವಿಟಿ ಪ್ರಮಾಣ ಶೇ. 14.03 ಇದ್ದು, ಮರಣ ಪ್ರಮಾಣ ಶೇ. 1.71 ಇದೆ.