ಮಹಾತ್ಮ ಗಾಂಧಿಯ ಮರಿ ಮೊಮ್ಮಗಳಿಗೆ 7 ವರ್ಷ ಜೈಲುಶಿಕ್ಷೆ


ಮಹಾತ್ಮ ಗಾಂಧಿಯ ಮರಿ ಮೊಮ್ಮಗಳಿಗೆ 7 ವರ್ಷ ಜೈಲುಶಿಕ್ಷೆ

ಜೊಹಾನ್ಸ್‍ಬರ್ಗ್ : ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿ ಆರೋಪದಲ್ಲಿ ಮಹಾತ್ಮ ಗಾಂಧೀಜಿಯವರ ಮರಿ ಮೊಮ್ಮಗಳಿದ ಆಶಿಶ್ ಲತಾ ರಾಮ್ ಗೋಬಿನ್‍ಗೆ ದಕ್ಷಿಣಾ ಆಫ್ರಿಕಾದ ಡರ್ಬನ್ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಹೋರಾಟಗಾರ್ತಿ ಎಲಾ ಗಾಂಧಿ ಮತ್ತು ದಿವಂಗತ ಮೇವಾ ರಾಮ್ ಬೋಬಿನ್ ಅವರ ಪುತ್ರಿ ಆಶಿಶ್ ಲತಾ ರಾಮ್ ಗೋಬಿನ್ ಅವರಿಗೆ 6 ಮಿಲಿಯನ್ ಆಫ್ರಿಕನ್ ರಾಂಡ್ (3.22 ಕೋಟಿ ರೂ) ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿ ಪ್ರಕರಣದಲ್ಲಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಈ ಪ್ರಕರಣದಲ್ಲಿ ಆಶೀಶ್ ಲತಾ ರಾಮ್‍ಗೋಬಿನ್ ತಪ್ಪಿತಸ್ಥೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಉದ್ಯಮಿ ಎಸ್.ಆರ್.ಮಹಾರಾಜ ಎಂಬುವವರನ್ನು ವಂಚಿಸಿದ ಆರೋಪ ಈಕೆಯ ಮೇಲಿತ್ತು. ವಾಸ್ತವವಾಗಿ ಭಾರತದಿಂದ ಸರಬರಾಜು ಆಗದ ಸರಕಿನ ಮೇಲಿನ ಆಮದು ಮತ್ತು ಕಸ್ಟಮ್ಸ್ ಸುಂಕವನ್ನು ತುಂಬುವ ಸಲುವಾಗಿ ಮಹಾರಾಜ್ 62 ಲಕ್ಷ ರಾಂಡ್ ಮುಂಗಡವನ್ನು ಆರೋಪಿಗೆ ನೀಡಿದ್ದರು ಎನ್ನಲಾಗಿದೆ.

ಲತಾ ರಾಂಗೋಬಿನ್, ಮಾನವ ಹಕ್ಕುಗಳ ಹೋರಾಟಗಾರ್ತಿ ಇಳಾ ಗಾಂಧಿ ಮತ್ತು ದಿವಂಗತ ಮೇವಾ ರಾಮ್‍ಗೋಬಿಂದ್ ಅವರ ಪುತ್ರಿಯಾಗಿದ್ದು, ಡರ್ಬಾನ್‍ನ ವಿಶೇಷ ವಾಣಿಜ್ಯ ಅಪರಾಧಗಳ ನ್ಯಾಯಾಲಯ ನೀಡಿದ ಈ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾಲಾವಕಾಶವನ್ನು ಕೂಡಾ ನಿರಾಕರಿಸಲಾಗಿದೆ. ಲತಾ ವಿರುದ್ಧದ ವಿಚಾರಣೆ 2015ರಲ್ಲಿ ಆರಂಭವಾಗಿತ್ತು. ಭಾರತದಿಂದ ಮೂರು ಕಂಟೈನರ್ ಲೆನಿನ್ ಬಟ್ಟೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಬಿಂಬಿಸಿ ಸಂಭಾವ್ಯ ಹೂಡಿಕೆದಾರರ ಮನವೊಲಿಸುವ ಸಲುವಾಗಿ ಆರೋಪಿ ನಕಲಿ ಇನ್‍ವೈಸ್ ಮತ್ತು ದಾಖಲೆಗಳನ್ನು ಸೃಷ್ಟಿಸಿದ್ದರು ಎಂದು ರಾಷ್ಟ್ರೀಯ ಅಭಿಯೋಜನಾ ಪ್ರಾಧಿಕಾರ (ಎನ್‍ಪಿಎ)ಯ ಬ್ರಿಗೇಡಿಯರ್ ಹಂಗ್ವಾನಿ ಮುಲಾವುದ್‍ಜಿ ಆರೋಪಿಸಿದ್ದರು.

ಆ ಸಂದರ್ಭದಲ್ಲಿ ಲತಾ 50 ಸಾವಿರ ರಾಂಡ್ ಮೊತ್ತದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. 2015ರ ಆಗಸ್ಟ್‍ನಲ್ಲಿ ಆಫ್ರಿಕಾ ಪಾದರಕ್ಷೆ ವಿತರಣಾದಾರರ ಸಂಘದ ಅಧ್ಯಕ್ಷ ಮಹಾರಾಜ್ ಅವರನ್ನು 2015ರ ಆಗಸ್ಟ್‍ನಲ್ಲಿ ಲತಾ ಭೇಟಿ ಮಾಡಿದ್ದರು ಎಂದು ಸೋಮವಾರ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಲಾಯಿತು. ಕಂಪನಿ ಬಟ್ಟೆ, ಲೆನಿನ್ ಮತ್ತು ಪಾದರಕ್ಷೆಗಳ ಆಮದು, ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿದೆ. ಈ ಕಂಪೆನಿ ಇತರ ಕಂಪೆನಿಗಳಿಗೆ ಲಾಭ ಹಂಚಿಕೆ ಆಧಾರದಲ್ಲಿ ಹಣಕಾಸು ನೆರವನ್ನೂ ನೀಡುತ್ತದೆ.

ತನಗೆ ಹಣಕಾಸು ಮುಗ್ಗಟ್ಟು ಇದ್ದು, ಆಮದು ಸುಂಕ ಮತ್ತು ಕಸ್ಟಮ್ಸ್ ಸುಂಕ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬಂದರಿನಲ್ಲಿ ಇದನ್ನು ತುಂಬಲು ಹಣದ ಅವಶ್ಯಕತೆ ಇದೆ ಎಂದ ಆರೋಪಿ, ಸುಳ್ಳು ಇನ್‍ವೈಸ್ ತೋರಿಸಿ ಮಹಾರಾಜ್ ಅವರನ್ನು ನಂಬಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಾರಾಜ್ 62 ಲಕ್ಷ ರಾಂಡ್ ಪಾವತಿಸಿದ್ದರು ಎಂದು ಎನ್‍ಪಿಎ ವಕ್ತಾರೆ ನತಾಶಾ ಕಾರಾ ಹೇಳಿದ್ದಾರೆ.