ಬೈಡನ್ ನನ್ನನ್ನು ಹಂತಕ ಎಂದು ಕರೆದಿದ್ದಕ್ಕೆ ನನಗೆ ಚಿಂತೆಯಿಲ್ಲ


ಬೈಡನ್ ನನ್ನನ್ನು ಹಂತಕ ಎಂದು ಕರೆದಿದ್ದಕ್ಕೆ ನನಗೆ ಚಿಂತೆಯಿಲ್ಲ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ತಮ್ಮನ್ನು ‘ಹಂತಕ’ ಎಂದು ಕರೆದಿದ್ದರ ಬಗ್ಗೆ ತಾವು ಹೆಚ್ಚು ಚಿಂತಿಸಿಲ್ಲ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಹೇಳಿದ್ದಾರೆ.

ಒಂದು ಸಂದರ್ಶನದಲ್ಲಿ ಜೋ ಬೈಡನ್, ಪುಟಿನ್ ಅವರನ್ನು ಹಂತಕ ಎಂದು ಕರೆದಿದ್ದರು. ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ ಅವರು ನೋವಿಚೋಕ್ ಎಂಬ ವಿಷ ಪದಾರ್ಥ ಸೇವಿಸಿದ್ದ ಪ್ರಕರಣವನ್ನು ಉಲ್ಲೇಖಿಸಿ ಪುಟಿನ್ ವಿರುದ್ಧ ಕಿಡಿಕಾರಿದ್ದರು. ಇನ್ನೂ ನನ್ನ ಆಡಳಿತಾವಧಿಯಲ್ಲಿ, ಎಲ್ಲಾ ರೀತಿಯ ಕಾರಣಗಳು ಮತ್ತು ನೆಪಗಳಿಂದಾಗಿ ನಾನು ಎಲ್ಲಾ ಆಯಾಮಗಳಿಂದ, ಕ್ಷೇತ್ರಗಳಿಂದ ದಾಳಿ ಎದುರಿಸಿದ್ದೇನೆ. ಇದ್ಯಾವುದೂ ನನ್ನನ್ನು ಅಚ್ಚರಿಗೊಳಿಸಿಲ್ಲ’ ಎಂದು ಪುಟಿನ್ ಹೇಳಿದರು.

ಇನ್ನೂ ಯುಎಸ್ ಮಾಜಿ ಅಧ್ಯಕ್ಷ ಟ್ರಂಪ್ ಅಸಾಧಾರಣ ಮತ್ತು ಪ್ರತಿಭಾವಂತ ವ್ಯಕ್ತಿ ಎಂದು ನಾನು ಈಗಲೂ ನಂಬುತ್ತೇನೆ. ಇಲ್ಲದಿದ್ದರೆ ಅವರು ಅಮೆರಿಕದ ಅಧ್ಯಕ್ಷರಾಗುತ್ತಿರಲಿಲ್ಲ. ಅವರದು ವರ್ಣರಂಜಿತ ವ್ಯಕ್ತಿತ್ವ. ನೀವು ಅವರನ್ನು ಇಷ್ಟಪಡಬಹುದು ಅಥವಾ ಇಷ್ಟಪಡದೆಯೂ ಇರಬಹುದು. ಈ ಹಿಂದೆ ಅವರೇನು ತುಂಬಾ ಕಾಲದಿಂದ ರಾಜಕೀಯದಲ್ಲಿ ಇದ್ದವರಲ್ಲ. ಕೆಲವರು ಅವರನ್ನು ಇಷ್ಟಪಡುತ್ತಾರೆ, ಇನ್ನೂ ಕೆಲವರು ಇಷ್ಟಪಡುವುದಿಲ್ಲ. ಆದರೆ ಅದೇ ವಾಸ್ತವ’ ಎಂದು ಅಭಿಪ್ರಾಯಪಟ್ಟಿದ್ದಾರೆ.