ಯೋಗ ನೇಪಾಳದಲ್ಲಿ ಹುಟ್ಟಿಕೊಂಡಿದ್ದು ಭಾರತದಲ್ಲಲ್ಲ


ಯೋಗ ನೇಪಾಳದಲ್ಲಿ ಹುಟ್ಟಿಕೊಂಡಿದ್ದು ಭಾರತದಲ್ಲಲ್ಲ

ಕಠ್ಮಂಡು: ಯೋಗ ನೇಪಾಳದಲ್ಲಿ ಹುಟ್ಟಿಕೊಂಡಿದ್ದು ಹೊರತು ಭಾರತದಲ್ಲಲ್ಲ ಎಂದು ನೇಪಾಳದ ಉಸ್ತುವಾರಿ ಪ್ರಧಾನಿ ಕೆ.ಪಿ.ಶರ್ಮಾ ಒಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಒಲಿ, ಯೋಗವು ನೇಪಾಳದಲ್ಲಿ ಹುಟ್ಟಿಕೊಂಡಿತು, ಭಾರತದಲ್ಲಿ ಅಲ್ಲ. ಯೋಗ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ, ಭಾರತದ ಸ್ವರೂಪ ಈಗಿನಂತಿರಲಿಲ್ಲ ಬದಲಾಗಿ ವಿವಿಧ ವಿಭಾಗಗಳಲ್ಲಿ ವಿಂಗಡನೆಯಾಗಿತ್ತು. ಆದರೆ ಭಾರತೀಯ ತಜ್ಞರು ಇದರ ಬಗ್ಗೆ ಸತ್ಯವನ್ನು ಮರೆಮಾಡುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.