ಒಂದೇ ನಿಮಿಷದಲ್ಲಿ ಮಹಿಳೆಗೆ ಮೂರು ಡೋಸ್ ಲಸಿಕೆ!


ಒಂದೇ ನಿಮಿಷದಲ್ಲಿ ಮಹಿಳೆಗೆ ಮೂರು ಡೋಸ್ ಲಸಿಕೆ!

 

ಮುಂಬಯಿ: ಆನಂದ್ ನಗರ ಲಸಿಕೆ ಕೇಂದ್ರದಲ್ಲಿ ಒಂದೇ ಬಾರಿ ಮೂರು ಕೋವಿಡ್ ಇಂಜೆಕ್ಷನ್ ಪಡೆದುಕೊಂಡಿರುವುದಾಗಿ ಅಲ್ಲಿನ ಥಾಣೆ ನಿವಾಸಿ 28 ವರ್ಷದ
ಮಹಿಳೆಯೊಬ್ಬರು ದೂರುನಿಡಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆಯ ಪತಿ ಥಾಣೆ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ ಉದೋಗಿಯಾಗಿದ್ದು, ಪತಿಯ ಬಳಿ ಮಹಿಳೆ ತನಗೆ ಕೋವಿಡ್ ಇಂಜೆಕ್ಷನ್ ಮೂರು ಡೋಸ್ ಲಸಿಕೆ ನೀಡಿರುವ ವಿಷಯ ತಿಳಿಸಿದ ನಂತರ ಈ ಬೇಜವಾಬ್ದಾರಿ ಕೆಲಸ ಅಧಿಕಾರಿಗಳ ಗಮನಕ್ಕೆ ಬಂದಿರುವುದಾಗಿ ವರದಿ ತಿಳಿಸಿದೆ. ಈ ವಿಷಯವನ್ನು ಆಕೆಯ ಪತಿ ಸ್ಥಳೀಯ ಕಾರ್ಪೋರೇಟರ್‌ಗೆ ತಿಳಿಸಿದ್ದರೆ. ಆದರೆ ತನ್ನ ಪತಿ ಸ್ಥಳೀಯ ಮಹಾನಗರ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತಾನು ದೂರು ನೀಡುವ ವಿಚಾರದಲ್ಲಿ ಆಸಕ್ತಿ ಹೊಂದಿಲ್ಲ ಎಂದು ತಿಳಿಸಿರುವುದಾಗಿ ವರದಿಯಾಗಿದೆ.

ಒಂದೇ ನಿಮಿಷದಲ್ಲಿ ಮೂರು ಕೋವಿಡ್ ಡೋಸ್ ಲಸಿಕೆ ಪಡೆದ ನಂತರ ತನ್ನ ಪತ್ನಿಗೆ ಜ್ವರ ಕಾಣಿಸಿಕೊಂಡಿತ್ತು. ಆದರೆ ಮಾರನೇ ದಿನ ಆಕೆ ಆರೋಗ್ಯವಾಗಿದ್ದಳು ಎಂದು ಪತಿ ತಿಳಿಸಿದ್ದಾರೆ. ಈ ಕುರಿತು ಸುದ್ದಿಗಾರರ ಜತೆ ಮಾತನಾಡಿರುವ ಆರೋಗ್ಯಾಧಿಕಾರಿ ಡಾ.ಖುಷ್ಬೂ ತಾವ್ರೆ, ಸಂತ್ರಸ್ತೆಯ ಮನೆಗೆ ವೈದ್ಯರ ತಂಡ ಭೇಟಿ ನೀಡಿ, ಆಕೆಯ ಆರೋಗ್ಯದ ಪರಿಶೀಲನೆ ನಡೆಸಿದೆ. ಈ ವಿಷಯದ ಬಗ್ಗೆ ತನಿಖೆ ನಡೆಸಲು ನಾವು ಸಮಿತಿಯನ್ನು ರಚಿಸಿದ್ದೇವೆ ಎಂದು ಹೇಳಿದರು.

ಇದೀಗ ಮಹಿಳೆಯ ಆರೋಗ್ಯದ ಬಗ್ಗೆ ಮಹಾನಗರ ಪಾಲಿಕೆ ನಿಗಾ ವಹಿಸಿರುವುದಾಗಿ ಸುದ್ದಿ ಬಂದಿದೆ.