ಡೆಲ್ಟಾ ಸೋಂಕು ಎಲ್ಲಾ ದೇಶಗಳಿಗೂ ಹಬ್ಬುತ್ತಿದೆ


ಡೆಲ್ಟಾ ಸೋಂಕು ಎಲ್ಲಾ ದೇಶಗಳಿಗೂ ಹಬ್ಬುತ್ತಿದೆ

ಸ್ವಿಟ್ಜಲೆರ್ಂಡ್ : ಡೆಲ್ಟಾ ಸೋಂಕು ಎಲ್ಲಾ ದೇಶಗಳಿಗೂ ಹಬ್ಬುತ್ತಿದೆ. ಇದುವರೆಗೂ ಯಾವುದೇ ದೇಶ ಡೆಲ್ಟಾದಿಂದ ಹೊರ ಬರಲು ಸಾಧ್ಯವಾಗಿಲ್ಲ ಡೆಲ್ಟಾ ರೂಪಾಂತರಿ ಮಾರಕವಾಗಿ ಪರಿಣಮಿಸುವ ಸಾಧ್ಯತೆ ಇರುವುದರಿಂದ ಇಡೀ ವಿಶ್ವ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ನಿರ್ದೇಶಕ ಟೆಟ್ರೋಸ್ ಅದಾನೋಂ ಗೇಬ್ರಿಯಾಸಸ್ ಎಚ್ಚರಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಡೆಲ್ಟಾ ಮಾದರಿ ಭಯಾನಕ ರೂಪ ತಾಳುವ ಸಾಧ್ಯತೆ ಇದ್ದು ಕಡಿಮೆ ಲಸಿಕೆ ಹಾಕಿಸಿರುವ ದೇಶಗಳ ಪರಿಸ್ಥಿತಿ ಊಹಿಸಲು ಅಸಾಧ್ಯ, ಡೆಲ್ಟಾ ರೂಪಾಂತರಿ ಕ್ಷಣ ಮಾತ್ರದಲ್ಲಿ ಹರಡುವ ಸಾಮಥ್ರ್ಯ ಹೊಂದಿರುವುದರಿಂದ ಈಗಾಗಲೇ ಹಲವಾರು ದೇಶಗಳು ಡೆಲ್ಟಾ ಸೋಂಕಿಗೆ ಸಿಲುಕಿಕೊಂಡಿವೆ. ಡೆಲ್ಟಾ ಸೋಂಕು ಎಲ್ಲಾ ದೇಶಗಳಿಗೂ ಹಬ್ಬುತ್ತಿದೆ. ಇದುವರೆಗೂ ಯಾವುದೇ ದೇಶ ಡೆಲ್ಟಾದಿಂದ ಹೊರ ಬರಲು ಸಾಧ್ಯವಾಗಿಲ್ಲ ಎಂದು ಕಳವಳ ವ್ಯಕ್ತಪಡಿಡಿಸದ್ದಾರೆ.

ಇನ್ನೂ ಈಗಾಗಲೇ ವಿಶ್ವದ 98 ರಾಷ್ಟ್ರಗಳಲ್ಲಿ ಡೆಲ್ಟಾ ಸೋಂಕು ಹೆಚ್ಚಾಗಿದ್ದು,ಇನ್ನಿತರ ಹಲವಾರು ರಾಷ್ಟ್ರಗಳಿಗೆ ಅತಿ ವೇಗವಾಗಿ ಹರಡುತ್ತಿದೆ. ಕೆಲವೇ ದಿನಗಳಲ್ಲಿ ಅದರ ಭೀಕರತೆ ಕಂಡು ಬರಲಿದೆ. ಸಾರ್ವಜನಿಕ ಆರೋಗ್ಯ ಹಾಗೂ ಅತಿ ಶೀಘ್ರ ಕೊರೊನಾ ಪರೀಕ್ಷೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಸದ್ಯದ ಸ್ಥಿತಿಯಲ್ಲಿ ಸಾಧ್ಯವಿಲ್ಲ. ಹೀಗಾಗಿ ಸಾರ್ವಜನಿಕರೇ ಸಾಮಾಜಿಕ ಅಂತರ ಕಾಪಾಡಿ ಎಂದು ಸಲಹೆ ನೀಡಿದ್ದಾರೆ.