29ಮಂದಿ ಪ್ರಯಾಣಿಕರಿದ್ದ ವಿಮಾನ ನಾಪತ್ತೆ


29ಮಂದಿ ಪ್ರಯಾಣಿಕರಿದ್ದ ವಿಮಾನ ನಾಪತ್ತೆ

ಮಾಸ್ಕೊ:  ಪೆಟ್ರೊಪವ್ಲೊವಸ್ಕ್- ಕಮ್ಚಟಾಸ್ಕೈನಿಂದ ಕಾಮ್ಚಾಟ್ಸ್ಕಿಯಲ್ಲಿರುವ ಪಲಾನಾಗೆ ಹೊರಟಿದ್ದ ವಿಮಾನ ನಾಪತ್ತೆಯಾಗಿದ್ದು.

ಮಂಗಳವಾರ ಭೂ ಸ್ಪರ್ಶ ಮಾಡುವ ಪ್ರಯತ್ನದಲ್ಲಿದ್ದಾಗ ವಿಮಾನ ವಾಯು ಸಂಚಾರ ನಿಯಂತ್ರಣ ವಿಭಾಗದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು ಎಂದು ಪ್ರಾದೇಶಿಕ
ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ರಷ್ಯಾದ ಪೂರ್ವಭಾಗದಿಂದ 29ಮಂದಿ ಪ್ರಯಾಣಿಕರಿದ್ದ ವಿಮಾನ ನಾಪತ್ತೆಯಾಗಿದೆ ಎಂದು ಇಂಟಫ್ರ್ಯಾಕ್ಸ್ ಮತ್ತು ಆರ್‍ಐಎ ನೊವೊಸ್ಟಿ ಸುದ್ದಿ ಸಂಸ್ಥೆಗಳು ತುರ್ತು ಸಚಿವಾಲಯದ ಮಾಹಿತಿಯನ್ನು ಉಲ್ಲೇಖಿಸಿ ವರದಿ ಮಾಡಿವೆ.