ಇಂದು ಭೂಮಿಗೆ ಅಪ್ಪಳಿಸಲಿರುವ ಸೌರ ಬಿರುಗಾಳಿ


ಇಂದು ಭೂಮಿಗೆ ಅಪ್ಪಳಿಸಲಿರುವ ಸೌರ ಬಿರುಗಾಳಿ

 

ಪ್ರಬಲ ಸೌರ ಚಂಡಮಾರುತ ಇಂದು ಭೂಮಿಗೆ ಅಪ್ಪಳಿಸಲಿದ್ದು, ಜಿಪಿಎಸ್, ಮೊಬೈಲ್‌ಫೋನ್ ಸಿಗ್ನಲ್, ಉಪಗ್ರಹ ಟಿವಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದ ನಾಸಾ ಎಚ್ಚರಿಕೆ ನೀಡಿದೆ.

ಸೂರ್ಯನ ವಾತಾವರಣದಲ್ಲಿ ಉಂಟಾಗಿರುವ ಸೌರ ಬಿರುಗಾಳಿ ಸುಮಾರು ೧೬ ಲಕ್ಷ ಕಿಲೋಮೀಟರ್ ವೇಗದಲ್ಲಿ ಇಂದು ಭೂಮಿಯನ್ನು ಅಪ್ಪಳಿಸುವ ಸಾಧ್ಯತೆ ಇದ್ದು, ಸೂರ್ಯನ ಆಯಸ್ಕಾಂತೀಯ ಪ್ರಭಾವ ಇರುವ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತಾದೆ ಎಂದು ನಾಸಾ ಹೇಳಿದೆ. ಇನ್ನೂ ಇದು ಉಪಗ್ರಹಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಜಿಪಿಎಸ್ ನ್ಯಾವಿಗೇಷನ್, ಮೊಬೈಲ್ ಫೋನ್ ಸಿಗ್ನಲ್ ಮತ್ತು ಸ್ಯಾಟಲೈಟ್ ಟಿವಿಯಲ್ಲಿ ತೊಂದರೆಗೆ ಕಾರಣವಾಗಬಹುದು. ಹಾಗೇ ಟ್ರಾನ್ಸ್ಫಾರ್ಮರ್‌ಗಳನ್ನು ಸಹ ಸ್ಫೋಟವಾಗುವ ಸಾಧ್ಯತೆ ಇದೆ ಎಂದು ನಾಸಾ ಹೇಳಿದೆ.