ಬೆಂಗಳೂರಿನಲ್ಲಿದ್ದ 681 ವಿದೇಶಿಯರು ನಾಪತ್ತೆ


ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಅಕ್ರಮವಾಗಿ ಬಂದು ನೆಲೆಯೂರಿರುವ 681 ವಿದೇಶಿಯರು ನಾಪತ್ತೆಯಾಗಿದ್ದಾರೆ ಎಂದು ನಗರ ಪೆÇಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ. ಇದುವರೆಗಿನ ಮಾಹಿತಿ ಪ್ರಕಾರ 681 ಜನ ವಿದೇಶಿ ಪ್ರಜೆಗಳು ನಾಪತ್ತೆಯಾಗಿದ್ದು ಅಂತಹವರನ್ನ ಪತ್ತೆ ಹಚ್ಚಿ ವಾಪಸ್ ಕಳಿಸುವ ಕೆಲಸ ಮಾಡಲಾಗುವುದು. ಪ್ರಾದೇಶಿಕ ವಿದೇಶಿ ನೋಂದಣಿ ಕೇಂದ್ರ (ಎಫ್ ಆರ್ ಆರ್ ಒ) ಮೂಲಕ ಮಾಹಿತಿ ಪಡೆದು ಪತ್ತೆ ಮಾಡಲಾಗುವುದು ಎಂದರು. ವಿದ್ಯಾಭ್ಯಾಸ ಸೋಗಿನಲ್ಲಿ ಬೆಂಗಳೂರಿಗೆ ಬರುವ ವಿದೇಶಿ ವಿದ್ಯಾರ್ಥಿಗಳು ಒಂದು ಕಡೆ ನೆಲೆಸಿ, ವೀಸಾ, ಪಾಸ್  ಪೋರ್ಟ್ಅ ವಧಿ ಮುಗಿದ ಬಳಿಕ ಸ್ಥಳೀಯ ಬೇರೆ ವಿಳಾಸಕ್ಕೆ ಶಿಫ್ಟ್ ಆಗುತ್ತಾರೆ. ಅವರ ವಿಳಾಸ ಪತ್ತೆ ಹಚ್ಚಿ ಕಾನೂನುಬಾಹಿರವಾಗಿ ನೆಲೆಯೂರಿರುವ ವಿದೇಶಿಯರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದರು.