ಬೆಂಗಳೂರಿನಲ್ಲಿ ಪತ್ರಿದಿನ ಎರಡು ಸಾವಿರ ಕೋವಿಡ್ ಟೆಸ್ಟ್


ಬೆಂಗಳೂರಿನಲ್ಲಿ ಪತ್ರಿದಿನ ಎರಡು ಸಾವಿರ ಕೋವಿಡ್ ಟೆಸ್ಟ್

ಬೆಂಗಳೂರು : ನಗರದಲ್ಲಿ ನಿಧಾನಗತಿಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. 10 ರಿಂದ 14 ದಿನಗಳ ಕಾಲ ಕೋವಿಡ್ ಸೋಂಕಿತರು ಆಸ್ಪತ್ರೆಯಲ್ಲಿ ಅಥವಾ ಮನೆ ಐಸೋಲೇಷನ್​​ನಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಈ ಪ್ರಕಾರ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ನಿಗದಿಯಾಗುತ್ತದೆ.

ಕೆಲ ಸಂದರ್ಭ ಆಸ್ಪತ್ರೆಗಳಲ್ಲಿ ಹೆಚ್ಚು ದಿನಗಳ ಕಾಲ ಚಿಕಿತ್ಸೆ ಪಡೆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆಯೂ ಎರಡು ವಾರಗಳ ಹಿಂದೆ 300 ರಿಂದ 350 ಇದ್ದು, ಇತ್ತೀಚೆಗೆ 400 ರಿಂದ 450ಕ್ಕೆ ಏರಿಕೆಯಾಗುತ್ತಿದೆ. ಪ್ರತಿ ವಾರದ ಲೆಕ್ಕಾಚಾರದಲ್ಲಿ ನೋಡಿದಾಗ ನಿಧಾನವಾಗಿ ಏರಿಕೆಯಾಗುತ್ತಿರುವುದು ಕಂಡು ಬರುತ್ತಿದೆ ಎಂದು ಆರೋಗ್ಯ ವಿಶೇಷ ಆಯುಕ್ತ ಡಿ.ರಂದೀಪ್ ತಿಳಿಸಿದರು. ನಗರದಲ್ಲಿ 155 ಕಂಟೈನ್‌ಮೆಂಟ್ ಝೋನ್​​ಗಳಿವೆ. ಈ ಪೈಕಿ 78 ಅಪಾರ್ಟ್‌ಮೆಂಟ್​​ಗಳಲ್ಲಿ ಕ್ಲಸ್ಟರ್ಸ್ ಕಂಡು ಬಂದಿದ್ದರೆ, 70 ಮನೆಗಳಲ್ಲಿ ಹಾಗೂ 3-4 ಹಾಸ್ಟೆಲ್​​ಗಳಲ್ಲಿ ಕಂಡು ಬಂದಿದೆ‌ ಎಂದರು.