ಮೂರನೇ ಅಲೆ ಮಧ್ಯೆ ಡೆಲ್ಟಾ ಪ್ಲಸ್ ಅಬ್ಬರ


ಮೂರನೇ ಅಲೆ ಮಧ್ಯೆ ಡೆಲ್ಟಾ ಪ್ಲಸ್ ಅಬ್ಬರ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಮಹಾಮಾರಿ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಡೆಡ್ಲಿ ಡೆಲ್ಟಾ ಪ್ಲಸ್ ಕೂಡ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ಮತ್ತೆ ಮೂವರಲ್ಲಿ ಡೆಲ್ಟಾ ಪ್ಲಸ್ ಸೋಂಕು ದೃಢಪಟ್ಟಿದೆ. ಬೊಮ್ಮನಹಳ್ಳಿಯಲ್ಲಿಯ 29 ವರ್ಷದ ವ್ಯಕ್ತಿಗೆ ಡೆಲ್ಟಾ ಪ್ಲಸ್ ದೃಢಪಟ್ಟಿದ್ದು, ಆತ ನಾಪತ್ತೆಯಾಗಿದ್ದಾನೆ. ನಂದಿನಿ ಲೇಔಟ್ ನ ಇಬ್ಬರಲ್ಲಿ ಡೆಲ್ಟಾ ಪ್ಲಸ್ ಪತ್ತೆಯಾಗಿದೆ. ಕೊರೊನಾ ಮೂರನೇ ಅಲೆ ಹಾಗೂ ಡೆಲ್ಟಾ ವೈರಸ್ ಗಳ ನಡುವೆ ಬೆಂಗಳೂರಿನಲ್ಲಿ ಮೈಕ್ರೋ ಕಂಟೈನ್ಮೆಂಟ್ ವಲಯಗಳನ್ನು 162ಕ್ಕೆ ಏರಿಕೆ ಮಾಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಹಲವು ವಾರ್ಡ್ ಗಳಲ್ಲಿ ಕಳೆದ 10 ದಿನಗಳಲ್ಲಿ ಕೋವಿಡ್ ಕೇಸ್ ಹೆಚ್ಚಾಗುತ್ತಿದ್ದು, ಮಹದೇವಪುರದಲ್ಲಿ 42 ಪ್ರಕರಣ ಪತ್ತೆಯಾಗಿದ್ದರೆ, ಪೂರ್ವ ವಲಯದಲ್ಲಿ 38, ಬೊಮ್ಮನಹಳ್ಳಿಯಲ್ಲಿ 28, ದಕ್ಷಿಣ ವಲಯದಲ್ಲಿ 19, ಯಲಹಂಕದಲ್ಲಿ 17, ರಾಜರಾಜೇಶ್ವರಿನಗರ 7, ಬೆಳ್ಳಂದೂರು, ಬೇಗೂರು 8 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಮೂರನೇ ಅಲೆ ಆತಂಕ ಎದುರಾಗಿದೆ.