ಮಳೆಯಿಂದ ಅಬ್ಬರಕ್ಕೆ ತತ್ತರಿಸಿದ ಚೀನಾ


ಮಳೆಯಿಂದ ಅಬ್ಬರಕ್ಕೆ ತತ್ತರಿಸಿದ ಚೀನಾ

 

ಬೀಜಿಂಗ್ : ಚೀನಾದ ಹುಬೆ ಪ್ರಾಂತ್ಯದ ಪಟ್ಟಣವೊಂದರಲ್ಲಿ ಬುಧವಾರದಿಂದ ಗುರುವಾರದವರೆಗೆ ಸುರಿದ ಭಾರೀ ಮಳೆಯಿಂದಾಗಿ ನಾಲ್ವರು ಕಾಣೆಯಾಗಿದ್ದಾರೆ ಅಲ್ಲದೆ 21 ಜನರು ಸಾವನ್ನಪಿದಾರೆ, ಎಂದು ಸ್ಥಳೀಯ ಅಧಿಕಾರಿಗಳು ವಿಷಯ ತಿಳಿಸಿದ್ದಾರೆ.

ಸುಯಿಕ್ಸಿಯನ್ ಕೌಂಟಿಯ ಲಿಯುಲಿನ್ ಟೌನ್ ಶಿಪ್ ನಲ್ಲಿ ಬುಧವಾರ ರಾತ್ರಿ 9 ಗಂಟೆಯಿಂದ ಗುರುವಾರದವರೆಗೆ ಭಾರೀ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿಯಿಂದಾಗಿ ಅಲ್ಲಿಯ ಪಟ್ಟಣ ಸಂಪೂರ್ಣ ಜಲಾವೃತವಾಗಿದ್ದು, ಈ ಕಾರಣ 21 ಜನರು ಮಳೆಯಿಂದ ಸಾವನ್ನಪಿದ್ದಾರೆ ಹಾಗು ನಾಲ್ವರು ಕಾಣೆಯಾಗಿದ್ದಾರೆ ಹೀಗೆ ವರದಿಯಾಗಿದೆ. ಸ್ಥಳಿಯ ಅಧಿಕಾರಿಗಳ ಮಾಹಿತಿ ಪ್ರಕಾರ ಟೌನ್ ಶಿಪ್ ನಲ್ಲಿ 8 ಸಾವಿರಕ್ಕೂ ಹೆಚ್ಚು ಜನರು ಪ್ರವಾಹಪೀಡಿತರಾಗಿದ್ದು, ವಿಪತ್ತು ಪರಿಹಾರ ಮತ್ತು ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.