ಆಫ್ಘಾನಿಸ್ತಾನದಲ್ಲಿರುವ ಭಾರತೀಯರಿಗಾಗಿ ಹೆಲ್ಪ್ ಲೈನ್ ಬಿಡುಗಡೆ


ಆಫ್ಘಾನಿಸ್ತಾನದಲ್ಲಿರುವ ಭಾರತೀಯರಿಗಾಗಿ ಹೆಲ್ಪ್ ಲೈನ್ ಬಿಡುಗಡೆ

ನವದೆಹಲಿ : ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಭಯೋತ್ಪಾದಕರು ಅಟ್ಟಹಾಸ ಮುಂದುವರೆದಿದ್ದು, ಸಧ್ಯ ಅಲ್ಲಿ ಪರಿಸ್ಥತಿ ಘನ ಗೋರವಾಗಿದೆ, ಈ ನಿಟ್ಟಿನಲ್ಲಿ ಆಫ್ಘಾನಿಸ್ತಾನದಲ್ಲಿ ಇರುವ ಭಾರತದ ಪ್ರಯಾಣಿಕರಿಗೆ ಸಹಾಯವಾಗಲು ಭಾರತೀಯ ವಿದೇಶಾಂಗ ಇಲಾಖೆ ಹೆಲ್ ಲೈನ್ ಬಿಡುಗಡೆ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ಸಚಿವಾಲಯ, ಭಾರತದ ವೀಸಾಕ್ಕಾಗಿ ಆನ್ ಲೈನ್ ಅರ್ಜಿ ಸಲ್ಲಿಸಬಹುದಾಗಿದ್ದು, ಕಾಲಮಿತಿಯಲ್ಲಿ ಹಿಂದೂ, ಸಿಕ್ ಸಮುದಾಯಗಳಿಗೆ ವೀಸಾ ವಿತರಣೆ ಮಾಡಲಾಗುತ್ತದೆ. ಪಿಎಲ್‍ಎಸ್ ಸಂಪರ್ಕ, ಫೋನ್ ಸಂಖ್ಯೆ: 9717785379 ಇಮೇಲ್: [email protected] , ಗೆ ಮೇಲ್ ಮಾಡುವ ಮೂಲಕ ವೀಸಾ ಪಡೆದುಕೊಳ್ಳಬಹುದು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.