ಅನಿವಾರ್ಯವಾಗಿ ನಾನು ದೇಶ ತೊರೆದೆ


ಅನಿವಾರ್ಯವಾಗಿ ನಾನು ದೇಶ ತೊರೆದೆ

ದುಬೈ: ದೇಶ ಬಿಡುವ ಮುನ್ನ ನಾನು ನನ್ನ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೆ. ತಾಲಿಬಾನ್ ಉಗ್ರರಿಂದ ಉಂಟಾಗಬಹುದಾದ ರಕ್ತಪಾತ ತಪ್ಪಿಸಲು ದೇಶ ತೊರೆದೆ ಪ್ರಾಣಭೀತಿಯಿಂದ ಅಲ್ಲ ಎಂದು ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ.

ಆಫ್ಘಾನ್ ತೊರೆದ ಬಳಿಕ ಫೇಸ್ ಬುಕ್ ವಿಡಿಯೋದಲ್ಲಿ ಹೇಳಿಕೆ ನೀಡಿರುವ ಅಶ್ರಫ್ ಘನಿ, ದೇಶದಲ್ಲಿ ತಾಲಿಬಾನಿಗಳು ನಡೆಸಬಹುದಾದ ಸಂಭಾವ್ಯ ರಕ್ತಪಾತವನ್ನು ತಡೆಯುವ ಉದ್ದೇಶದಿಂದ ದೇಶ ತೊರೆದೆನ್ನೆ ಹೊರೆತು ಪ್ರಾಣಭೀತಿಯಿಂದ ಪರಾರಿಯಾಗಿಲ್ಲ ಎಂದು ಹೇಳಿದ್ದಾರೆ, ಇನ್ನೂ ತಾಲಿಬಾನ್‍ಗಳು ಅಟ್ಟಹಾಸಕ್ಕೆ ತಮ್ಮ ಬೂಟುಗಳನ್ನು ಬದಲಾಯಿಸಲು ಸಹ ಸಮಯವಿರಲಿಲ್ಲ ಈ ಕಾರಣದಿಂದ ಅರಮನೆಯಲ್ಲಿ ಧರಿಸಿದ್ದ ಚಪ್ಪಲಿಗಳೊಂದಿಗೆ ಕಾಬೂಲ್ ನಿಂದ ಹೊರಟಿರುವುದಾಗಿ ತಿಳಿಸಿದ್ದಾರೆ.

ಅಷ್ಟೇ ಅಲ್ಲ ದೇಶದ ಸುರಕ್ಷತೆಯನ್ನು ದೇಶದ ಭದ್ರತಾ ಪಡೆಗಳ ಮೇಲೆ ವಹಿಸಿ ನಾನು ದೇಶ ತೊರೆದೆ. ದೇಶ ಬಿಡುವ ಮುನ್ನ ನಾನು ನನ್ನ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೆ. 25 ವರ್ಷಗಳ ಹಿಂದೆ ನಡೆದಿದ್ದ ರಕ್ತಪಾತ ಮತ್ತೆ ಸಂಭವಿಸಬಾರದು ಎಂದು ನಿರ್ಧರಿಸಿ, ಅನಿವಾರ್ಯವಾಗಿ ನಾನು ದೇಶ ತೊರೆದೆ ಎಂದು ಹೇಳಿದ್ದಾರೆ.