ವಿಮಾನದಿಂದ ಕೆಳಗೆ ಬಿದ್ದ ವ್ಯಕ್ತಿ ಖ್ಯಾತ ಫುಟ್ಬಾಲ್ ಆಟಗಾರ


ವಿಮಾನದಿಂದ ಕೆಳಗೆ ಬಿದ್ದ ವ್ಯಕ್ತಿ ಖ್ಯಾತ ಫುಟ್ಬಾಲ್ ಆಟಗಾರ

ಕಾಬೂಲ್ : ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಹಿಡಿತ ಸಾಧಿಸಿದ ನಂತರ ಅಲ್ಲಿನ ಸಾವಿರಾರು ಜನರು ದೇಶವನ್ನು ತೊರೆಯಲು ಪ್ರಯತ್ನಿಸಿದ್ದಾರೆ. ಈ ಸಂರ್ಭದಲ್ಲಿ ಯುಎಸ್ ವಿಮಾನದಿಂದ ಬಿದ್ದು ಮೃತಪಟ್ಟ ಯುವಕ ಪ್ರಸಿದ್ಧ ಫುಟ್ಬಾಲ್ ಆಟಗಾರ ಎಂದು ತಿಳಿದುಬಂದಿದೆ.

ಈ ಹಿಂದೆ ಅಫ್ಘಾನಿಸ್ತಾನದಿಂದ ತೆರಳುತ್ತಿದ ಯುಎಸ್ ವಿಮಾನದಿಂದ ಇಬ್ಬರು ಬೀಳುತ್ತಿರುವ ದೃಶ್ಯ ಸಂಚಲವ ಸೃಷ್ಠಸಿತ್ತು. ಆದರೆ ವಿಮಾನದಿಂದ ಬೀಳುತ್ತಿದ್ದ ಯುವಕನ ಬಗ್ಗೆ ಆಘಾತಕಾರಿ ಮಾಹಿತಿ ಹೊರಹೊಮ್ಮಿದೆ. ವಿಮಾನದಿಂದ ಬಿದ್ದು ಮೃತಪಟ್ಟವರಲ್ಲಿ ಒಬ್ಬ ಅಫ್ಘಾನಿಸ್ತಾನದ ರಾಷ್ಟ್ರೀಯ ಫುಟ್ಬಾಲ್ ತಂಡದ ಆಟಗಾರ ಎಂದು ಗೊತ್ತಾಗಿದೆ. 19 ವರ್ಷದ ಜಾಕಿ ಅನ್ವಾರಿ ವಿಮಾನದ ರೆಕ್ಕೆಯ ಮೇಲಿಂದ ಬಿದ್ದು ಮೃತಪಟ್ಟಿರುವುದಾಗಿ ಆಫ್ಘನ್ ಕ್ರೀಡಾ ನಿರ್ದೇಶನಾಲಯ ಖಚಿತಪಡಿಸಿದೆ.