ನಾವು ನಿಮ್ಮನ್ನ ಸುಮ್ಮನೆ ಬಿಡುವುದಿಲ್ಲ.!


ನಾವು ನಿಮ್ಮನ್ನ ಸುಮ್ಮನೆ ಬಿಡುವುದಿಲ್ಲ.!

ವಾಷಿಂಗ್ಟನ್: ತಾಲಿಬಾನಿಗಳು ಕಾಬೂಲ್‍ನಲ್ಲಿ 12 ಅಮೆರಿಕನ್ ಸೈನಿಕರನ್ನು ಕೊಂದ ಆತ್ಮಾಹುತಿ ಬಾಂಬ್ ದಾಳಿಕೋರರನ್ನು ಸುಮ್ಮನೇ ಬಿಡುವುದಿಲ್ಲ ಹುಡುಕಿ ಹೊಡೆದು ಹಾಕುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ತಾಲಿಬಾನ್‍ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಬಿಡನ್, ಈ ದಾಳಿಯನ್ನು ಮಾಡಿದವರಿಗೆ ಹಾಗೂ ಅಮೆರಿಕಕ್ಕೆ ಹಾನಿ ಬಯಸಿದ ಯಾರಿಗಾದರೂ ಸರಿ, ನಾವು ಅವರನ್ನ ಕ್ಷಮಿಸುವುದಿಲ್ಲ.ಸುಮ್ಮನೇ ಬಿಡುವುದಿಲ್ಲ ಹುಡುಕಿ ಹೊಡೆದು ಹಾಕುತ್ತೇವೆ ಎಂದು ತಾಲಿಬಾನ್‍ಗಳ ವಿರುದ್ಧ ಕಿಡಿಕಾರಿದ್ದಾರೆ. ಇನ್ನೂ ಸಾವನ್ನಪ್ಪಿದ್ದ ಸೈನಿಕರನ್ನು ಹೀರೋಗಳು ಅಂತ ಕರೆದ ಬೈಡನ್, ಕಾಬೂಲ್‍ನಿಂದ ತಮ್ಮ ಸೈನಿಕರು ವಾಪಸ್ಸು ಬರುವ ಕಾರ್ಯಾಚರಣೆಯು ದಿನಾಂಕ ಆಗಸ್ಟ್ 31 ರವರೆಗೆ ಮುಂದುವರಿಯುತ್ತದೆ ಎಂದು ಹೇಳಿದರು.