ತಾಲಿಬಾನ್‍ಗೆ ಎಚ್ಚರಿಕೆ ನೀಡಿದ ಆಸ್ಟ್ರೇಲಿಯ.!


ತಾಲಿಬಾನ್‍ಗೆ ಎಚ್ಚರಿಕೆ ನೀಡಿದ ಆಸ್ಟ್ರೇಲಿಯ.!

ತಾಲಿಬಾನ್ ವಿರುದ್ಧ ಸಿಡಿದ್ದೆದ ಆಸ್ಟ್ರೇಲಿಯ. ಮಹಿಳೆಯರ ಮೇಲಿನ ಕ್ರೀಡಾ ನಿಷೇಧಕ್ಕೆ ಆಸ್ಟ್ರೇಲಿಯ ಕ್ರಿಕೆಟ್ ಬೋರ್ಡ್ ತೀವ್ರ ವಿರೋಧ. ನಿಷೇಧ ಹಿಂಪಡೆಯದಿದ್ದರೆ ಆಸ್ಟ್ರೇಲಿಯಗೆ ಆಫ್ಘಾನ್ ಪುರುಷರ ತಂಡಕ್ಕೂ ನೋ ಎಂಟ್ರಿ ಎಂದು ಆಸ್ಟ್ರೇಲಿಯ ತಾಲಿಬಾನ್‍ಗೆ ಖಡಕ್ ಎಚ್ಚರಿಕೆ ನೀಡಿದೆ.

ಇತ್ತೀಚೆಗಷ್ಟೇ ಆಫ್ಘಾನಿಸ್ಥಾನವನ್ನು ವಶಕ್ಕೆ ತೆಗೆದುಕೊಂಡಿರುವ ತಾಲಿಬಾನಿಗಳು ಕ್ರಮೇಣ ಶರಿಯಾ ಕಾನೂನು ಜಾರಿಗೆ ತರುತ್ತಿದ್ದು, ಇದರ ಭಾಗವಾಗಿ ಇದೀಗ ಮಹಿಳೆಯರು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸಿದ್ದಾರೆ. ಈ ವಿಚಾರವಾಗಿ ಗರಂ ಆಗಿರುವ ಆಸ್ಟ್ರೇಲಿಯ, ಮಹಿಳೆಯರ ಕ್ರೀಡೆ ಅಭಿವೃದ್ಧಿಯನ್ನು ಬೆಂಬಲಿಸುವುದು ನಮ್ಮ ಕರ್ತವ್ಯವಾಗಿದೆ. ಮಹಿಳೆಯರ ಕ್ರಿಕೆಟ್‍ಗೆ ತಾಲಿಬಾನ್ ಅನುಮತಿ ನೀಡದಿದ್ದರೆ ಮುಂಬರುವ ನವೆಂಬರ್‍ನಲ್ಲಿ ಅಫ್ಘಾನಿಸ್ಥಾನ ವಿರುದ್ಧ ಹೋಬರ್ಟ್‍ನಲ್ಲಿ ನಡೆಯಬೇಕಿರುವ ಐತಿಹಾಸಿಕ ಚೊಚ್ಚಲ ಟೆಸ್ಟ್ ಪಂದ್ಯವನ್ನು ರದ್ದುಗೊಳಿತ್ತೇವೆ ಎಂದು ಆಸ್ಟ್ರೇಲಿಯನ್ ಕ್ರಿಕೆಟ್ ಬೋರ್ಡ್ ಎಚ್ಚರಿಕೆ ನೀಡಿದೆ.