ವಾಷಿಂಗ್ಟನ್‍ನಲ್ಲಿ ಮೋದಿಗೆ ಅದ್ದೂರಿ ಸ್ವಾಗತ..!


ವಾಷಿಂಗ್ಟನ್‍ನಲ್ಲಿ ಮೋದಿಗೆ ಅದ್ದೂರಿ ಸ್ವಾಗತ..!

ವಾಷಿಂಗ್ಟನ್: ಯುಎಸ್ ಅಧ್ಯಕ್ಷ ಜೋ ಬೈಡೆನ್ ಆಹ್ವಾನದ ಮೇರೆಗೆ ಕ್ವಾಡ್ ಮುಖಂಡರ ವ್ಯಕ್ತಿಗತ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಾಶಿಂಗ್ಟನ್ ನಗರಕ್ಕೆ ತೆರಳಿದ್ದು, ಭಾರತೀಯ ರಾಯಭಾರಿ ತರಂಜೀತ್ ಸಿಂಗ್ ಸಂಧು ಸೇರಿದಂತೆ ಅಲ್ಲಿಯ ಭಾರತೀಯ ಸಮುದಾಯ ಅದ್ಧೂರಿಯಾಗಿ ಸ್ವಾಗತಿಸಿದರು.

ಈ ಬಗ್ಗೆ ಟ್ವೀಟ್ ಮಾಡಿದ ಮೋದಿ ಅವರು, ವಾಷಿಂಗ್ಟನ್ ಡಿಸಿಯಲ್ಲಿ ಭಾರತೀಯ ಸಮುದಾಯದ ಹೃತ್ಪೂರ್ವಕ ಸ್ವಾಗತಕ್ಕಾಗಿ ಧನ್ಯವಾದಗಳು. ನಮ್ಮ ವಲಸಿಗರು ನಮ್ಮ ಶಕ್ತಿ. ಭಾರತೀಯ ವಲಸಿಗರು ಹೇಗೆ ವಿಶ್ವದಾದ್ಯಂತ ತಮ್ಮನ್ನು ಗುರುತಿಸಿಕೊಂಡಿದ್ದಾರೆ ಎಂಬುದು ಶ್ಲಾಘನೀಯ ಎಂದು ಪ್ರಶಂಶಿಸಿದ್ದಾರೆ.

ಇನ್ನೂ 2014 ರಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಪ್ರಧಾನಿ ಮೋದಿ ಅಮೆರಿಕಕ್ಕೆ ಪ್ರವಾಸ ಬೆಳೆಸಿರುವುದು ಇದು ಏಳನೇ ಬಾರಿ ಎನ್ನಲಾಗಿದೆ. ಈ ಭೇಟಿಯು “ಅಮೆರಿಕದೊಂದಿಗಿನ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಮತ್ತು ಜಪಾನ್, ಆಸ್ಟ್ರೇಲಿಯಾದೊಂದಿಗಿನ ಸಂಬಂಧವನ್ನು ಬಲಪಡಿಸುವ ಸಂದರ್ಭ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.