ನವೆಂಬರ್ 1ಕ್ಕೆ ಮದಗಜ ಸಾಂಗ್ ರಲೀಸ್.!


ನವೆಂಬರ್ 1ಕ್ಕೆ ಮದಗಜ ಸಾಂಗ್ ರಲೀಸ್.!

ಸ್ಯಾಂಡಲ್‍ವುಡ್‍ನಲ್ಲಿ ಹಾಡುಗಳ ಹಬ್ಬ ಜೋರಾಗಿದ್ದು, ಇತ್ತೀಚೆಗೆ ಮದಗಜ ಚಿತ್ರದ ಗೆಳೆಯ ನನ್ನ ಗೆಳೆಯ ಎಂಬ ಈ ಸಿನಿಮಾದ ವಿಡಿಯೋ ಹಾಡೊಂದನ್ನು ನವೆಂಬರ್ 1ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‍ನಲ್ಲಿ ಬಿಡೆಗಡೆ ಮಾಡುತ್ತಿದ್ದಾರೆ.

 

ಇತ್ತೀಚೆಗೆ ಮದಗಜ ಚಿತ್ರದ ಗೆಳೆಯ ನನ್ನ ಗೆಳೆಯ ಎಂಬ ಹಾಡು ಯುಟ್ಯೂಬ್ ನಲ್ಲಿ ಧೂಳೆಬ್ಬಿಸಿತ್ತು. ಮಹೇಶ್ ಕುಮಾರ್ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ಉಮಾಪತಿ ಶ್ರೀನಿವಾಸ್ ಗೌಡ ಬಂಡವಾಳ ಹೂಡಿದ್ದು, ಈ ಚಿತ್ರದಲ್ಲಿ ಶ್ರೀಮುರಳಿ ಅವರಿಗೆ ಜೋಡಿಯಾಗಿ ಆಶಿಕಾ ರಂಗನಾಥ್ ಅಭಿನಯಿಸಿದ್ದಾರೆ.

ಹಾಗೇಯೆ ಶಿವರಾಜ್ ಕೆ.ಆರ್. ಪೇಟೆ, ಜಗಪತಿ ಬಾಬು, ಚಿಕ್ಕಣ್ಣ ಸೇರಿದಂತೆ ಹಲವಾರು ಕಲಾವಿದರ ದಂಡೇ ಈ ಸಿನಿಮಾದಲ್ಲಿದ್ದು, ಈ ಡಿಸೆಂಬರ್ ನಲ್ಲಿ ಈ ಚಿತ್ರ ತೆರೆಮೇಲೆ ಬರಲಿದೆ ಎಂದು ಹೇಳಲಾಗಿದೆ.