ಬೈ ಟು ಲವ್: ಸಾಂಗ್ ರಿಲೀಸ್


ಬೈ ಟು ಲವ್: ಸಾಂಗ್ ರಿಲೀಸ್

ಬಜಾರ್ ಖ್ಯಾತಿಯ ಹೀರೋ ಧನ್ವೀರ್ ಮತ್ತು ಶ್ರೀಲೀಲಾ ಅಭಿನಯದ ಬೈ ಟು ಲವ್ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದ್ದು, ಸದ್ಯ ಬೈ ಟು ಲವ್ ಸಿನಿಮಾದ ಪ್ರೀ-ಪ್ರೊಡಕ್ಷನ್‌ ಅಂತಿಮ ಹಂತದ ಕೆಲಸದಲ್ಲಿರುವ ಚಿತ್ರತಂಡ ಈಗಾಗಲೇ ಪೋಸ್ಟರ್‌, ಟೀಸರ್ ಬಿಡುಗಡೆ ಮಾಡಿ ಸಿನಿಪ್ರಿಯರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.

 

ಇನ್ನು ಬೈ ಟು ಲವ್ ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಇಂದು ಬಿಡುಗಡೆಯಾಗಲಿರುವ ಐ ಹೇಟ್ ಲವ್ ಹಾಡಿನಲ್ಲಿ ನಾಯಕ ಧನ್ವೀರ್ ಮತ್ತು ನಾಯಕಿ ಶ್ರೀಲೀಲಾ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಹಾಗೂ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೂಡ ಬೈ ಟು ಲವ್ ಸಿನಿಮಾಕ್ಕೆ ಸಾಥ್ ಕೊಡುತ್ತಿದ್ದು, ಚಿತ್ರದ ಮೊದಲ ಹಾಡನ್ನು ರಕ್ಷಿತ್ ಶೆಟ್ಟಿ ಬಿಡುಗಡೆಗೊಳಿಸಲಿದ್ದಾರೆ. ಇದರ ನಡುವೆಯೇ ಚಿತ್ರತಂಡ ಇಂದು ಚಿತ್ರದ ಐ ಹೇಟ್ ಲವ್ ಎಂಬ ಹಾಡನ್ನು ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ ಎಂದು ಹೇಳಲಾಗಿದೆ.

ಹಾಗೇಯೆ ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಕಥಾಹಂದರ ಹೊಂದಿರುವ ಬೈ ಟು ಲವ್ ಚಿತ್ರ ಕೆವಿಎನ್ ಪ್ರೊಡಕ್ಷನ್‌ ಬ್ಯಾನರ್‌ ನಲ್ಲಿ ನಿರ್ಮಾಣವಾಗುತ್ತಿದ್ದು, ಈ ಚಿತ್ರಕ್ಕೆ ಹರಿ ಸಂತೋಷ್ ನಿರ್ದೇಶನವಿದ್ದು, ಚಿತ್ರಕ್ಕೆ ಮಹೇಂದ್ರ ಸಿಂಹ ಛಾಯಾಗ್ರಹಣ, ಯೋಗಾನಂದ್ ಸಂಭಾಷಣೆ ಈ ಚಿತ್ರಕ್ಕೆ ಇದೆ ಸದ್ಯ ಬೈ ಟು ಲವ್ ಚಿತ್ರದ ಪ್ರಮೋಶನ್ಸ್ ಕೆಲಸಗಳನ್ನು ಶುರು ಮಾಡಿರುವ ಚಿತ್ರತಂಡ ಇದೇ ನವೆಂಬರ್ ಅಂತ್ಯಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಎಂದು ಹೇಳಲಾಗಿದೆ.