ಟಾಲಿವುಡ್‍ಗೆ ದುನಿಯಾ ವಿಜಯ್ ಪಾದಾರ್ಪಣೆ.!


ಟಾಲಿವುಡ್‍ಗೆ ದುನಿಯಾ ವಿಜಯ್ ಪಾದಾರ್ಪಣೆ.!

 

ಬೆಂಗಳೂರು: ಸಲಗ ಸಿನಿಮಾದ ಪ್ರತಿಕ್ರಿಯೆಯಿಂದ ಸಂತಸಗೊಂಡಿರುವ ನಟ ದುನಿಯಾ ವಿಜಯ್ ಟಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿರುವ ಸುದ್ದಿ ಹೊರಬಿದ್ದಿದೆ.

 

ಕ್ರ್ಯಾಕ್ ತೆಲುಗು ಸಿನಿಮಾ ನಿರ್ದೇಶಕ ಗೋಪಿಚಂದ್ ಮಲಿನೇನಿ ನಿರ್ದೇಶನ ಮಾಡುತ್ತಿರುವ ನಂದಮೂರಿ ಬಾಲಕೃಷ್ಣ ಅಭಿನಯದ ಸಿನಿಮಾದಲ್ಲಿ ದುನಿಯಾ ವಿಜಯ್ ನಟಿಸುತ್ತಿದ್ದಾರೆ ಎನ್ನುವ ಬಗ್ಗೆ ಸುದ್ದಿ ಕೇಳಿಬಂದಿದ್ದು, ಈ ಸಿನಿಮಾಗೆ NB107 ಎಂದು ಹೆಸರಿಡಲಾಗಿದೆ. ಪಾತ್ರವರ್ಗದಲ್ಲಿ ಶ್ರುತಿ ಹಾಸನ್ ನಟಿಸುತ್ತಿದ್ದು, ದುನಿಯಾ ವಿಜಯ್ ಈ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ ಎಂದು ಹೇಳಲಾಗಿದೆ.

ಹಾಗೇಯೆ ರಾಯಲಸೀಮೆ ಪ್ರಾಂತ್ಯದಲ್ಲಿ ಚಿತ್ರೀಕರಣ ನಡೆಯಲಿದ್ದು, ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಇದಾಗಿದೆ ಎಂದು ತಿಳಿದುಬಂದಿದೆ. ಹಾಗೂ ಇತ್ತೀಚಿಗೆ ಬಿಡುಗಡೆಯಾದ ಸಲಗ ಸಿನಿಮಾದಲ್ಲಿ ದುನಿಯಾ ವಿಜಯ್ ನಟನೆ ಮತ್ತು ನಿರ್ದೇಶನ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದು, ಸಲಗ ಸಿನಿಮಾವನ್ನು ಟಗರು ನಿರ್ಮಾಪಕ ಕೆ.ಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ.