ಅನಸೂಯಾ ಲುಕ್ ರಿವೀಲ್.!


ಅನಸೂಯಾ ಲುಕ್ ರಿವೀಲ್.!

 

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಈಗಾಗಲೇ ಸಾಕಷ್ಟು ಕಲಾವಿದರ ಲುಕ್ ಬಿಡುಗಡೆ ಮಾಡಿದ್ದು, ಇದೀಗ ಅನಸೂಯಾ ಭಾರದ್ವಾಜ್ ಅವರ ಲುಕ್ ರಿವೀಲ್ ಮಾಡಲಾಗಿದೆ.

 

ಟಾಲಿವುಡ್ ನ ಜನಪ್ರಿಯ ಆಂಕರ್ ಆಗಿರುವ ಅನಸೂಯಾ ಭಾರಧ್ವಾಜ್ ಈ ಸಿನಿಮಾದಲ್ಲಿ ದಾಕ್ಷಾಯಣಿ ಎಂಬ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು, ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಹಾಗೂ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ನೀಡಿದ್ದಾರೆ.

ಹಾಗೇಯೆ ಡಿಸೆಂಬರ್ 17ರಂದು ತೆಲುಗು ಸೇರಿದಂತೆ ಕನ್ನಡ ತಮಿಳು ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ತೆರೆ ಕಾಣಲಿದೆ ಎಂದು ಹೇಳಲಾಗಿದೆ.