ರಮೇಶ್ ಇಂದಿಗೂ ಚಾರ್ಮ್ ಉಳಿಸಿಕೊಂಡಿದ್ದಾರೆ.!


ರಮೇಶ್ ಇಂದಿಗೂ ಚಾರ್ಮ್ ಉಳಿಸಿಕೊಂಡಿದ್ದಾರೆ.!

 

ಬೆಂಗಳೂರು: ನಟ ರಮೇಶ್ ಅರವಿಂದ್ ಅವರು ನಾಯಕ ನಟನಾಗಿ ನಟಿಸಿರುವ ಸೈಬರ್ ಕ್ರೈಮ್ ಆಧಾರಿತ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ 100 ಭಾಗಿಯಾಗಿರುವ ಬಗ್ಗೆ ನಟಿ ಪೂರ್ಣ ಎಕ್ಸೈಟ್ ಆಗಿದ್ದು, ಸಿನಿಮಾ ನವೆಂಬರ್ 19ರಂದು ತೆರೆ ಕಾಣುತ್ತಿದೆ.

 

ಈ ಕುರಿತು ಮಾತನಾಡಿದ ಪೂರ್ಣ, ಸಿನಿಮಾದಲ್ಲಿ ನಟಿಸುವ ಸಂದರ್ಭದಲ್ಲಿ ರಮೇಶ್ ಅರವಿಂದ್ ಮತ್ತು ರಚಿತಾ ರಾಮ್ ಅವರು ನೀಡಿದ ಸಹಕಾರವನ್ನು ತುಂಬು ಹೃದಯದಿಂದ ಸ್ಮರಿಸಿಕೊಳ್ಳುತ್ತಾ, ಸಂಭಾಷಣೆಗಳನ್ನು ಒಪ್ಪಿಸುವ ಸಮಯದಲ್ಲಿ ರಮೇಶ್ ಅವರು ಟಿಪ್ಸ್ ನೀಡಿದ್ದನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಹಾಗೂ ಪೂರ್ಣ ಅವರು ಕನ್ನಡದಲ್ಲಿ ಈ ಹಿಂದೆ ಜೋಶ್ ಸಿನಿಮಾದಲ್ಲಿ ನಟಿಸಿದ್ದರು. ಆಗ ಅವರು 11ನೇ ತರಗತಿ ವಿದ್ಯಾರ್ಥಿನಿ ಎನ್ನುವುದು ವಿಶೇಷ. ಅವರು 100 ಸಿನಿಮಾದ ಸಂಭಾಷಣೆಗಳನ್ನು ಮೊದಲು ತಮ್ಮ ಭಾಷೆಯಲ್ಲಿ ಬರೆದುಕೊಂಡು ಅಭ್ಯಾಸ ಮಾಡಿದ್ದಾಗಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಹಾಗೇಯೆ ರಮೇಶ್ ಅರವಿಂದ್ ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿರುವ ಪೂರ್ಣ ರಮೇಶ್ ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ ಎಂದು ಕಾಂಪ್ಲಿಮೆಂಟ್ ನೀಡಿದ್ದು, ಈ ಸಿನಿಮಾ ಮೊಬೈಲ್ ನಿಂದ ಉಂಟಾಗುವ ತೊಂದರೆಗಳನ್ನು, ಅದರ ಬಳಕೆ ಕುರಿತು ಸಂದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ.