ಪತ್ರಲೇಖಾರನ್ನು ವರಿಸಿದ ನ್ಯೂಟನ್ ನಟ.!


ಪತ್ರಲೇಖಾರನ್ನು ವರಿಸಿದ ನ್ಯೂಟನ್ ನಟ.!

ಚಂಡೀಗಢ: ಶನಿವಾರವಷ್ಟೆ ಎಂಗೇಜ್ ಮೆಂಟ್ ಜರುಗಿದ ಬಾಲಿವುಡ್ ನಟ ರಾಜ್ ಕುಮಾರ್ ರಾವ್ ತಮ್ಮ ದೀರ್ಘಕಾಲದ ಗೆಳತಿ ಪತ್ರಲೇಖ ಅವರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಚಂಡೀಗಢದ ಒಬೆರಾಯ್ ರೆಸಾರ್ಟ್ ನಲ್ಲಿ ಇಬ್ಬರ ವಿವಾಹ ಮಹೋತ್ಸವ ನಡೆಯಿತು. 37 ವರ್ಷದ ನಟ ರಾಜ್ ಕುಮಾರ್ ರಾವ್ ತಮ್ಮ ವಿವಾಹದ ಸುದ್ದಿಯನ್ನು ಪೋಸ್ಟ್ ಮಾಡಿದ್ದು, 11 ವರ್ಷಗಳ ನಂತರ ಗೆಳತಿ ಪತ್ರಲೇಖ ಅವರನ್ನು ವಿವಾಹವಾಗಿರುವುದಾಗಿ ಬಹಿರಂಗಪಡಿಸಿದ್ದಾರೆ.

ಹಾಗೇಯೆ ಪ್ರಿಯಾಂಕಾ ಚೋಪ್ರಾ, ತಾಪಸಿ ಪನ್ನು, ಸಾನ್ಯಾ ಮಲ್ಹೋತ್ರಾ, ದಿಯಾ ಮಿರ್ಝಾ ಮತ್ತಿತರ ಬಾಲಿವುಡ್ ಮಂದಿ ಜೋಡಿಗಳಿಗೆ ಶುಭ ಹಾರೈಸಿದ್ದು, ರಾಜಕುಮಾರ್ ರಾವ್ ಮತ್ತು ಪತ್ರಲೇಖ ಇಬ್ಬರೂ ಜೊತೆಯಾಗಿ ಸಿಟಿ ಲೈಟ್ಸ್ ಎನ್ನುವ 2014ರ ಸಿನಿಮಾದಲ್ಲಿ ನಟಿಸಿದ್ದಾರೆ.