ಭಟ್ಟರ ಜೊತೆ ‘ಗರಡಿ’ ಪ್ರವೇಶಿಸಿದ ಕೌರವ


ಭಟ್ಟರ ಜೊತೆ ‘ಗರಡಿ’ ಪ್ರವೇಶಿಸಿದ ಕೌರವ

ಬೆಂಗಳೂರು : ರಾಜ್ಯ ಕೃಷಿ ಸಚಿವ, ಕೌರವ ಖ್ಯಾತಿಯ ನಟ ಬಿ.ಸಿ. ಪಾಟೀಲ್ ಫುಲ್ ಟೈಮ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದು, ಬಹುದಿನಗಳ ಬಳಿಕ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಜೊತೆಗೆ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ.

ಗರಡಿ ಎಂಬ ಹೆಸರಿನ ಚಿತ್ರದಲ್ಲಿ ಯಶಸ್ ಸೂರ್ಯ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಚಿತ್ರದ ಪೆÇೀಸ್ಟರ್ ಬಿಡುಗಡೆಯಾಗಿ ಗಮನ ಸೆಳೆದಿದೆ. ಬಿ.ಸಿ. ಪಾಟೀಲ್ ಅವರ ಹುಟ್ಟುಹಬ್ಬದ ದಿನದಂದು, ಸ್ವಕ್ಷೇತ್ರ ಹಿರೇಕೆರೂರಿನಲ್ಲಿ, ಗರಡಿ ಸಿನಿಮಾದ ಮುಹೂರ್ತ ಕಾರ್ಯಕ್ರಮವನ್ನು ನೆರವೇರಿಸಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಚಿತ್ರದ ಟೈಟಲ್ ಬಿಡುಗಡೆ ಮಾಡಲಾಗಿತ್ತು.

ಈ ಚಿತ್ರಕ್ಕೆ ವಿ.ಹರಿಕೃಷ್ಣ ಅವರು ಸಂಗೀತ ನೀಡುತ್ತಿದ್ದು, ಕೆಲ ಚಿತ್ರಗಳಲ್ಲಿ ಈಗಾಗಲೇ ನಾಯಕನಾಗಿ ಕಾಣಿಸಿಕೊಂಡಿರುವ ಯಶಸ್ ಸೂರ್ಯ ಈ ಚಿತ್ರದ ಮೂಲಕ ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ. ಹೊಸ ಪ್ರಯೋಗಕ್ಕೆ ಮುಂದಾಗಿರುವ ಭಟ್ಟರು, ಈ ಬಾರಿ ಉತ್ತರ ಕನ್ನಡ ಸೊಗಡಿನ ಆಯಕ್ಷನ್ ಚಿತ್ರ ನಿರ್ದೇಶಿಸುತ್ತಿದ್ದು, ಕಥೆಯಲ್ಲಿ ಮುಖ್ಯವಾಗಿ ಸಾಂಪ್ರದಾಯಿಕ ವ್ಯಾಯಾಮ ಶಾಲೆಗಳು ಮತ್ತು ಪೈಲ್ವಾನ್‍ಗಳ ಕಥಾ ಹಂದರ ಒಳಗೊಂಡಿದೆ ಎನ್ನುವ ವಿಚಾರ ತಿಳಿದು ಬಂದಿದೆ.

ಇನ್ನು ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಪಾತ್ರದ ಕುರಿತು ಕುತೂಹಲ ಮೂಡಿದೆ. ದರ್ಶನ್ ಗಾಗಿ ವಿಭಿನ್ನ ಪಾತ್ರ ಸೃಷ್ಟಿಸಿದ್ದೇವೆ ಎಂದು ಭಟ್ಟರು ಈಗಾಗಲೇ ಹೇಳಿದ್ದಾರೆ. ಉತ್ತರ ಕರ್ನಾಟಕದ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದೆ.