ಮೂರನೇ ಮದುವೆಗೆ ಅಮೀರ್ ರೆಡಿ..?


ಮೂರನೇ ಮದುವೆಗೆ ಅಮೀರ್ ರೆಡಿ..?

ಬಾಲಿವುಡ್ ನಟ ಅಮೀರ್ ಖಾನ್ ಎರಡನೇ ಮದುವೆ ಮುರಿದು ಬಿದ್ದಿದ್ದು, ಕಿರಣ್ ರಾವ್‍ಗೆ ವಿಚ್ಛೇದನ ನೀಡುವ ಘೋಷಣೆ ಮಾಡ್ತಿದ್ದಂತೆ ಅಭಿಮಾನಿಗಳು ದಂಗಾಗಿದ್ದಾರೆ.

 

ಬಾಲಿವುಡ್ ಬೆಸ್ಟ್ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅಮೀರ್-ಕಿರಣ್ ದೂರವಾಗ್ತಿರುವುದು ಅಭಿಮಾನಿಗಳಿಗೆ ಇಷ್ಟವಿರಲಿಲ್ಲ. ವಿಚ್ಛೇದನದ ಘೋಷಣೆ ಮಾಡಿದ್ದ ಅಮೀರ್, ಪತ್ನಿ ಕಿರಣ್ ರಾವ್ ಯಾವಾಗಲೂ ಒಳ್ಳೆಯ ಸ್ನೇಹಿತೆಯಾಗಿರ್ತಾರೆ ಎಂದಿದ್ದಾರೆ.

ಹಾಗೂ ಅಮೀರ್ ಮೊದಲು ರೀನಾ ದತ್ತಾ ಕೈ ಹಿಡಿದಿದ್ದು, ಅಮೀರ್-ರೀನಾಗೆ ಇಬ್ಬರು ಮಕ್ಕಳು. ನಂತರ 2005ರಲ್ಲಿ ನಿರ್ಮಾಪಕಿ ಕಿರಣ್ ರಾವ್ ಮದುವೆಯಾದ ಅಮೀರ್ ಗಂಡು ಮಗುವಿನ ತಂದೆ. ಅಮೀರ್ ವಿಚ್ಛೇದನ ಪಡೆಯುವುದಾಗಿ ಹೇಳ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ಅಮೀರ್ ಖಾನ್ ಮೂರನೇ ಮದುವೆಯ ಚರ್ಚೆ ಶುರುವಾಗಿದೆ.

ಹಾಗೇಯೆ ಅಮೀರ್, ಬಹುನಿರೀಕ್ಷಿತ ಚಿತ್ರ ಲಾಲ್ ಸಿಂಗ್ ಚಡ್ಡಾ ಬಿಡುಗಡೆಗೆ ಸಿದ್ಧವಾಗ್ತಿದ್ದು, ಇದರಲ್ಲಿ ಕರೀನಾ ಕಪೂರ್ ಖಾನ್ ಜೊತೆ ಅಮೀರ್ ಕಾಣಿಸಿಕೊಂಡಿದ್ದಾರೆ. ಈ ಮಧ್ಯೆ ಅಮೀರ್ ಮೂರನೇ ಮದುವೆಯ ಬಗ್ಗೆ ಚರ್ಚೆ ನಿರಂತರವಾಗಿ ನಡೆಯುತ್ತಿದ್ದು, ಅಮೀರ್ ಈ ಬಾರಿ ಯಾರನ್ನು ಮದುವೆಯಾಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.

ಹಾಗೂ ಲಾಲ್ ಸಿಂಗ್ ಚಡ್ಡಾ ಚಿತ್ರ ಬಿಡುಗಡೆ ನಂತರ ಅಮೀರ್ ಮದುವೆಯಾಗುವ ನಿರ್ಧಾರ ಪ್ರಕಟಿಸಲಿದ್ದಾರೆ ಎಂಬ ಸುದ್ದಿಯಿದೆ. ಈ ಚಿತ್ರಕ್ಕೆ ಯಾವುದೇ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕೆ ಅಮೀರ್ ಮದುವೆ ವಿಷ್ಯ ಮುಂದೂಡಿದ್ದಾರೆ ಎನ್ನಲಾಗ್ತಿದೆ. ಮತ್ತು ಈ ಚಿತ್ರ ಬಿಡುಗಡೆ ನಂತರ ಅಮೀರ್ ಮೂರನೇ ಮದುವೆ ಘೋಷಣೆ ಮಾಡಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.