ಆರ್ಯನ್‍ಗೆ ಹಚ್ಚೆ ಪ್ರದರ್ಶಿಸಿದ ಅಭಿಮಾನಿ.!


ಆರ್ಯನ್‍ಗೆ ಹಚ್ಚೆ ಪ್ರದರ್ಶಿಸಿದ ಅಭಿಮಾನಿ.!

 

ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ತಮ್ಮ ಸಿನಿಮಾಗಳ ಮೂಲಕ ಅಷ್ಟೊಂದು ಸುದ್ದಿಯಾಗದೇ ಇದ್ದರೂ ಸಹ ಸೋಶಿಯಲ್ ಮೀಡಿಯಾದಲ್ಲಿ ಆಯಕ್ಟಿವ್ ಆಗಿರುವ ಮೂಲಕ ಅನೇಕರನ್ನು ಸೆಳೆದಿದ್ದಾರೆ.

 

ಇಲ್ಲಿ ಅಭಿಮಾನಿಯೊಬ್ಬರು ತಮ್ಮ ಎದೆಯ ಮೇಲೆ ಕಾರ್ತಿಕ್ ಆರ್ಯನ್ ಹೆಸರು ಹಾಗೂ ಅವರ ಜನ್ಮ ದಿನಾಂಕವನ್ನು ಟ್ಯಾಟೂ ಹಾಕಿಸಿಕೊಂಡಿದ್ದನ್ನು ಕಂಡು ಆರ್ಯನ್ ಶಾಕ್ ಆಗಿದ್ದು, ತಮ್ಮ ಹುಟ್ಟು ಹಬ್ಬದಂದು ಮುಂಬೈನ ನಿವಾಸದ ಹೊರಗೆ ಜಮಾಯಿಸಿದ್ದ ಅಭಿಮಾನಿಗಳನ್ನು ಭೇಟಿ ಮಾಡುವ ವೇಳೆಯಲ್ಲಿ ಕಾರ್ತಿಕ್ ಆರ್ಯನ್ ವಿಶೇಷ ಫ್ಯಾನ್ ಜೊತೆ ಮಾತುಕತೆ ನಡೆಸಿದ್ದಾರೆ.

ಹಾಗೇಯೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಪಾಪರಾಜಿಗಳು ತರಿಸಿದ್ದ ಕೇಕ್ ಕತ್ತರಿಸಿದ ಕಾರ್ತಿಕ್ ಆರ್ಯನ್ ಬಳಿಕ ಅಭಿಮಾನಿಗಳನ್ನು ಭೇಟಿಯಾಗಿದ್ದು, ಅದರಲ್ಲಿ ಒಬ್ಬಾಕೆ ಕಾರ್ತಿಕ್ ಆರ್ಯನ್‍ಗೆ ಕೇಕ್ ನೀಡಿ ಟ್ಯಾಟೂ ಬಗ್ಗೆ ಹೇಳಿದ್ದಾರೆ. ನೀವು ಟ್ಯಾಟೂ ಹಾಕಿಸಿಕೊಂಡಿದ್ದೀರೇ..? ಎಂದು ಕಾರ್ತಿಕ್ ಕೇಳಿದ್ದು, ಬಳಿಕ ಅಭಿಮಾನಿಗೆ ಧನ್ಯವಾದ ಅರ್ಪಿಸಿದ್ದಾರೆ.

ಹಾಗೂ ಅಭಿಮಾನಿಯು ಟ್ಯಾಟೂ ಪ್ರದರ್ಶಿಸುತ್ತಿದ್ದಂತೆಯೇ ಈ ಟ್ಯಾಟೂ ನಿಮ್ಮದಾ..? ಇದು ಶಾಶ್ವತ ಟ್ಯಾಟೂವೇ..? ಎಂದು ಕಾರ್ತಿಕ್ ಕೇಳಿದಕ್ಕೆ ಅಭಿಮಾನಿ ಹೂ ಎನ್ನುತ್ತಿದ್ದಂತೆಯೇ ಕಾರ್ತಿಕ್ ಅತ್ಯಂತ ಖುಷಿಯಿಂದ ಧನ್ಯವಾದ ಅರ್ಪಿಸಿದ್ದಾರೆ.