ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಂಕಜ್.!


ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಂಕಜ್.!

ಸ್ಟಾರ್ ನಿರ್ದೇಶಕ ಹಾಗೂ ನಟ ಎಸ್,ನಾರಾಯಣ್ ಪುತ್ರ ಪಂಕಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸಮಾರಂಭದಲ್ಲಿ ಅನೇಕ ಚಿತ್ರರಂಗದ ತಾರೆಯರು, ರಾಯಕೀಯ ನಾಯಕರು, ಗಣ್ಯರು ಭಾಗಿಯಾಗಿದ್ದು, ಮೈಸೂರಿನಲ್ಲಿ ಸರಳವಾಗಿ ಮದುವೆ ಸಮಾರಂಭ ನೆರವೇರಿದೆ.

 

ಮದುವೆಗೆ ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಕೊರೊನಾ ಕಾರಣಕ್ಕೆ ಕೇವಲ ಕುಟುಂಬಸ್ಥರು ಮತ್ತು ಆಪ್ತರನ್ನು ಮಾತ್ರ ಆಹ್ವಾನಸಲಾಗಿದ್ದು, ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ಪಂಕಜ್ ಮದುವೆ ನಡೆದಿದೆ. ಹಾಗೂ ಎಸ್,ನಾರಾಯಣ್ ಅವರ ಮಗ ಪಂಕಜ್ ರಕ್ಷಿತಾ ಎನ್ನುವವರ ಜೊತೆಗೆ ಸಪ್ತಪದಿ ತುಳಿದಿದ್ದು, ಮದುವೆಗೆ ನಟ ದರ್ಶನ್ ಕೂಡ ಸಾಕ್ಷಿಯಾದರು.

ಹಾಗೇಯೆ ಹಿರಿಯ ನಟಿ ಶ್ರುತಿ,  ವಿನೋದ್ ಪ್ರಭಾಕರ್,  ಚಿಕ್ಕಣ್ಣ, ನಟಿ ಸುಧಾರಾಣಿ,  ಸೃಜನ್ ಲೋಕೇಶ್,  ಗಿರಿಜಾ ಲೋಕೇಶ್, ಯೋಗರಾಜ್ ಭಟ್,  ದರ್ಶನ್,  ವಿಷ್ಣುವರ್ಧನ್ ಕುಟುಂಬ, ಶ್ವೇತಾ ಚೆಂಗಪ್ಪ ಸೇರಿದಂತೆ ಹಲವರು ಮದುವೆಗೆ ಬಂದು ನವ ವಧು ವರರಿಗೆ ಹರಸಿದ್ದಾರೆ.

ಪಂಕಜ್ 16 ವರ್ಷ ಇದ್ದಾಗಲೇ ಚೈತ್ರದ ಚಂದ್ರಮ ಸಿನಿಮಾ ಮೂಲಕ ನಟನಾಗಿ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ್ರು. ಆ ನಂತರ ಚೆಲುವಿನ ಚಿಲಿಪಿಲಿ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ನಂತರ ದುಷ್ಟ, ದಾಂಡಿಗ ಸಿನಿಮಾದಲ್ಲಿ ನಟಿಸಿದ್ದು, ಹಾಗೂ ದಕ್ಷ, ಒಡೆಯ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.