ಮೊದಲ ಪಂದ್ಯದಲ್ಲಿ ಮೈದಾನಕ್ಕಿಳಿಯಲಿದ್ದಾರೆ ಧೋನಿ.!


ಮೊದಲ ಪಂದ್ಯದಲ್ಲಿ ಮೈದಾನಕ್ಕಿಳಿಯಲಿದ್ದಾರೆ ಧೋನಿ.!

 

ಐಪಿಎಲ್ 2022ರ ವೇಳಾಪಟ್ಟಿ ಬಹುತೇಕ ನಿರ್ಧಾರವಾಗಿದೆ. ಐಪಿಎಲ್ 2022ರ ಮೊದಲ ಪಂದ್ಯ ಏಪ್ರಿಲ್ ಮೊದಲ ವಾರದಿಂದ ಆರಂಭವಾಗಲಿದ್ದು, ಎಂ.ಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಐಪಿಎಲ್‍ನ ಮೊದಲ ಪಂದ್ಯ ಆಡಲಿದೆ.

 

ಚೆನ್ನೈ ಸೂಪರ್ ಕಿಂಗ್ಸ್, 2021ರ ಪ್ರಶಸ್ತಿ ಗೆದ್ದುಕೊಂಡಿದ್ದು, ಹಾಲಿ ಚಾಂಪಿಯನ್ ಆಗಿರುವ ಕಾರಣ, ಆರಂಭಿಕ ಪಂದ್ಯದಲ್ಲಿ ಅದಕ್ಕೆ ಅವಕಾಶ ಸಿಗಲಿದೆ. 2022ರಲ್ಲಿ 8 ತಂಡಗಳ ಬದಲಿಗೆ 10 ತಂಡಗಳು ಮೈದಾನಕ್ಕಿಳಿಯಲಿದ್ದು, 2 ಹೊಸ ತಂಡಗಳ ಸೇರ್ಪಡೆಯೊಂದಿಗೆ ಪಂದ್ಯಗಳ ಸಂಖ್ಯೆ 60 ರಿಂದ 74 ಕ್ಕೆ ಏರಲಿದೆ. ಹಾಗೂ ಐಪಿಎಲ್ 2022ರ ಎಲ್ಲ ಪಂದ್ಯಗಳು ಭಾರತದಲ್ಲಿಯೇ ನಡೆಯಲಿದೆ ಎಂದು ಬಿಸಿಸಿಐ ಘೋಷಣೆ ಮಾಡಿದೆ.

ಹಾಗೇಯೆ ಏಪ್ರಿಲ್ 2 ರಿಂದ ಸರಣಿ ಶುರುವಾಗಲಿದ್ದು, ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಮತ್ತು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ಜೂನ್ 4 ಅಥವಾ 5 ರಂದು ನಡೆಯುವ ಸಾಧ್ಯತೆಯಿದ್ದು, ಎಲ್ಲ ತಂಡಗಳು ತಲಾ 14-14 ಪಂದ್ಯಗಳನ್ನು ಆಡಲಿವೆ. ಹಾಗೂ 7 ತವರಿನಲ್ಲಿ ಹಾಗೂ 7 ಬೇರೆ ನಗರದಲ್ಲಿ ನಡೆಯಲಿದ್ದು, ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಯಾವ ತಂಡವನ್ನು ಎದುರಿಸಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಹಾಗೇಯೆ ಮುಂಬೈ ಇಂಡಿಯನ್ಸ್ ಜೊತೆ ಚೆನ್ನೈ ಮೊದಲ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಸಾಧ್ಯತೆಯಿದ್ದು, ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಅತಿ ಹೆಚ್ಚು ಬಾರಿ ಟಿ20 ಲೀಗ್‍ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಮತ್ತು ಸಿಎಸ್ಕೆ 4 ಬಾರಿ ಪ್ರಶಸ್ತಿ ಗೆದ್ದಿದೆ.