ಮಿಲನಾಗೆ ತಮಾಷೆ ಮಾಡಿದ ನೆಟ್ಟಿಗರು.!


ಮಿಲನಾಗೆ ತಮಾಷೆ ಮಾಡಿದ ನೆಟ್ಟಿಗರು.!

 

ಬೆಂಗಳೂರು: ಡಾರ್ಲಿಂಗ್ ಕೃಷ್ಣ-ನಿಶ್ವಿಕಾ ನಾಯ್ಡು ಅಭಿನಯದ ದಿಲ್ ಪಸಂದ್ ಸಿನಿಮಾದ ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಈ ಫಸ್ಟ್ ಲುಕ್ ಫೋಟೋ ಶೂಟ್ ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಡಾರ್ಲಿಂಗ್ ಕೃಷ್ಣ-ನಿಶ್ವಿಕಾ ಕ್ಲೋಸಪ್ ಫೋಟೋಗಳನ್ನು ನೋಡಿದ ನೆಟ್ಟಿಗರು ಲೈಟಾಗಿ ಮಿಲನಾ ನಾಗರಾಜ್ ಕಾಲೆಳೆದಿದ್ದು, ಕೃಷ್ಣ ಪತ್ನಿ ಮಿಲನಾಗೆ ನಿಮ್ಮ ಗಂಡನ ಬಗ್ಗೆ ಜೋಪಾನ ಎಂದಿದ್ದಾರೆ. ಯಾಕೆಂದರೆ ಡಾರ್ಲಿಂಗ್ ಕೃಷ್ಣ-ನಿಶ್ವಿಕಾ ಆ ಮಟ್ಟಿಗೆ ಇಂಟಿಮೇಟ್ ಫೋಟೋ ಶೂಟ್ ನಲ್ಲಿ ಪಾಲ್ಗೊಂಡಿದ್ದು ನೋಡಿ ಎಲ್ಲರೂ ಹುಬ್ಬೇರುವಂತೆ ಮಾಡಿದೆ.

ಹಾಗೇಯೆ ಮನೆಗೆ ಬಂದ ಮೇಲೆ ಕ್ಲಾಸ್ ತಗೊಳ್ಳಿ ಎಂದು ಮಿಲನಾಗೆ ನೆಟ್ಟಿಗರು ತಮಾಷೆ ಮಾಡಿದ್ದಾರೆ.