ಜಮಾಲಿಗುಡ್ಡದಲ್ಲಿ ಧನಂಜಯ್-ಅದಿತಿ.!


ಜಮಾಲಿಗುಡ್ಡದಲ್ಲಿ ಧನಂಜಯ್-ಅದಿತಿ.!

 

ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಹೀಗೊಂದು ವಿಭಿನ್ನ ಟೈಟಲ್‍ನ ಚಿತ್ರ ಸದ್ದಿಲ್ಲದೇ ಸೆಟ್ಟೇರಿ ಒಂದಷ್ಟು ಚಿತ್ರೀಕರಣ ಕೂಡಾ ಮುಗಿಸಿದ್ದು, ಡಾಲಿ ಧನಂಜಯ್ ಈ ಚಿತ್ರದ ನಾಯಕ. ಈ ಹಿಂದೆ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರ ನಿರ್ದೇಶಿಸಿರುವ ಕುಶಾಲ್ ಗೌಡ ಈ ಚಿತ್ರದ ನಿರ್ದೇಶಕರಾಗಿದ್ದಾರೆ.

 

ಈ ಚಿತ್ರದ ಬಗ್ಗೆ ಮಾತನಾಡಿದ ಧನಂಜಯ್, ನಿರ್ದೇಶಕರು ಸಾಕಷ್ಟು ತಿಳಿದುಕೊಂಡಿದ್ದಾರೆ. ಜಗತ್ತಿನ ಬೇರೆ ಬೇರೆ ಸಿನಿಮಾ, ಪುಸ್ತಕಗಳನ್ನು ಓದಿಕೊಂಡಿದ್ದು, ಈ ಸಿನಿಮಾವನ್ನು ತುಂಬಾ ನೀಟಾಗಿ ಕಟ್ಟಿಕೊಡುತ್ತಿದ್ದಾರೆ. ಹಾಗೂ ಇದೊಂದು ಫೀಲ್ ಇರುವ ಸಿನಿಮಾ. ಇಡೀ ಸಿನಿಮಾ ಪ್ರಯಾಣದ ಹಾದಿಯಲ್ಲೇ ಸಾಗುತ್ತದೆ. ನನ್ನ ಪಾತ್ರ ಕೂಡಾ ತುಂಬಾ ಸೊಗಸಾಗಿದೆ. ಮತ್ತು ಈ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿ. ಕೆಲವು ಸಿನಿಮಾಗಳನ್ನು ನಾವು ದುಡ್ಡಿಗಾಗಿ, ಇನ್ನು ಕೆಲವನ್ನು ಬ್ಯಾನರ್‌ಗಾಗಿ, ಸ್ಟಾರ್ ಕಾಸ್ಟ್‌ಗಾಗಿ ಮಾಡುತ್ತೇವೆ. ಆದರೆ, ಈ ಸಿನಿಮಾದಲ್ಲಿ ಎಲ್ಲವೂ ಇದೆ. ತುಂಬಾ ಖುಷಿಯಿಂದ ಒಪ್ಪಿಕೊಂಡ ಸಿನಿಮಾವಿದು ಎಂದು ಹೇಳಿದ್ದಾರೆ.

ಹಾಗೇಯೆ ಈ ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ತ್ರಿವೇಣಿ, ಭಾವನಾ ಸೇರಿದಂತೆ ಅನೇಕರು ನಟಿಸಿದ್ದು, ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದ್ದಾರೆ. ಹಾಗೂ ಈ ಚಿತ್ರಕ್ಕೆ ಮಾಸ್ತಿ ಅವರ ಸಂಭಾಷಣೆ ಇದ್ದು, ಈ ಚಿತ್ರವಾಗುವಲ್ಲಿ ಮಾಸ್ತಿ ಅವರ ಪಾತ್ರ ಕೂಡಾ ಪ್ರಮುಖವಾಗಿದೆ. ಮತ್ತು ಶ್ರೀಹರಿ ಈ ಚಿತ್ರದ ನಿರ್ಮಾಪಕರು ಎಂದು ಹೇಳಿದ್ದಾರೆ.