ಅಂಬೇಡ್ಕರ್-ಲೋಹಿಯಾ ಅನುಯಾಯಿಗಳ ಮೈತ್ರಿ.!


ಅಂಬೇಡ್ಕರ್-ಲೋಹಿಯಾ ಅನುಯಾಯಿಗಳ ಮೈತ್ರಿ.!

 

ಲಖನೌ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಂಬೇಡ್ಕರ್‌ವಾದಿಗಳು ಮತ್ತು ಸಮಾಜವಾದಿಗಳು ಜೊತೆಯಾಗಿ ಬಿಜೆಪಿಯನ್ನು ಸೋಲಿಸಲಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

 

ಈ ಕುರಿತು ಮಾತನಾಡಿದ ಅಖಿಲೇಶ್, ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳ ಜೊತೆಗೆ ಕೆಲಸ ಮಾಡಬೇಕು ಎಂಬ ರಾಮಮನೋಹರ ಲೋಹಿಯಾ ಅವರ ಅಪೇಕ್ಷೆ ಈಡೇರಲಿದೆ ಎಂದಿದ್ದು, ಬಿಜೆಪಿಯನ್ನು ಅಧಿಕಾರದಿಂದ ಉಚ್ಚಾಟಿಸಲು ಜನರು ಈಗಾಗಲೇ ನಿರ್ಧರಿಸಿದ್ದಾರೆ. ಸಮಯ ಬಂದಾಗ ಜನರು ತಮ್ಮ ಶೋಷಕರಿಗೆ ಪಾಠ ಕಲಿಸುತ್ತಾರೆ ಎಂದು ಸಂವಿಧಾನ ದಿನಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಹಾಗೂ ಮಾಜಿ ಸಂಸದೆ ಸಾವಿತ್ರಿಬಾಯಿ ಫುಲೆ, ಅಂಬೇಡ್ಕರ್ ಅವರ ಮೊಮ್ಮಕ್ಕಳಾದ ಪ್ರಕಾಶ್ ಅಂಬೇಡ್ಕರ್, ಭೀಮರಾವ್ ಯಶವಂತರಾವ್ ಅಂಬೇಡ್ಕರ್, ಬಿಎಸ್‍ಪಿ ಸ್ಥಾಪಕ ಕಾನ್ಶೀರಾಂ ಸಹೋದರಿ ಸ್ವರ್ಣ ಕೌರ್, ಎಸ್‍ಬಿಎಸ್‍ಪಿ ಮುಖ್ಯಸ್ಥ ಓಂಪ್ರಕಾಶ್ ರಾಜ್‍ಭರ್ ಮತ್ತು ಅಪ್ನಾ ದಳ ನಾಯಕಿ ಪಲ್ಲವಿ ಪಟೇಲ್ ಅವರು ಈ ಕಾರ್ಯಕ್ರಮ ಸಂಘಟಿಸಿದ್ದರು ಎಂದು ಹೇಳಿದ್ದಾರೆ.

ಹಾಗೇಯೆ ಅಂಬೇಡ್ಕರ್ ಅವರೊಂದಿಗೆ ಕೆಲಸ ಮಾಡಬೇಕು ಎಂಬ ಕನಸನ್ನು ಲೋಹಿಯಾ ಹೊಂದಿದ್ದರು. ಆದರೆ ಈ ಕನಸು ಈಡೇರಿಲ್ಲ ಅದನ್ನು ಈಡೇರಿಸುವ ಕನಸನ್ನು ನಾವು ಕೈಬಿಟ್ಟಿಲ್ಲ. 2022ರಲ್ಲಿ ಈ ಕನಸು ಖಂಡಿತವಾಗಿ ಈಡೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.