ಮಕ್ಕಳು ಶಬರಿಮಲೆ ದೇವಾಲಯಕ್ಕೆ ಹೋಗಬಹುದು.!


ಮಕ್ಕಳು ಶಬರಿಮಲೆ ದೇವಾಲಯಕ್ಕೆ ಹೋಗಬಹುದು.!

 

ತಿರುವನಂತಪುರ: ಆರ್ ಟಿಪಿಸಿಆರ್ ಪರೀಕ್ಷಾ ವರದಿ ಇಲ್ಲದೆ ಮಕ್ಕಳು ಶಬರಿಮಲೆ ದೇವಾಲಯಕ್ಕೆ ಹೋಗಲು ಕೇರಳ ಸರ್ಕಾರ ಇಂದು ಅವಕಾಶ ಮಾಡಿಕೊಟ್ಟಿದೆ.

 

ಯುವಕರು ದೇವಾಲಯ ಪ್ರವೇಶಕ್ಕೆ 72 ಗಂಟೆಗಳ ಮುಂಚಿನ ಆರ್ ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ ಅಥವಾ ಸಂಪೂರ್ಣ ಲಸಿಕೆ ಪ್ರಮಾಣದ ಅಗ್ಯವಿರುವುದಾಗಿ ಸರ್ಕಾರದ ಅಧಿಸೂಚನೆಯಲ್ಲಿ ಹೇಳಲಾಗಿದ್ದು, ಮಕ್ಕಳ ಜೊತೆಯಲ್ಲಿರುವ ಪೋಷಕರು ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವಿಕೆ ಮತ್ತು ಸ್ಯಾನಿಟೈಸರ್ಸ್ ಒಳಗೊಂಡಂತೆ ಕೋವಿಡ್ ಶಿಷ್ಠಾಚಾರಗಳನ್ನು ಪಾಲಿಸಬೇಕು ಎಂದು ತಿಳಿಸಲಾಗಿದೆ.

ಹಾಗೇಯೆ ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ಪೋಷಕರು ಹೊಣೆಯಾಗಿರುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.