ಪ್ರೇಮಂ ಪೂಜ್ಯಂನತ್ತ ಸ್ಟೂಡೆಂಟ್ಸ್ ಗ್ಯಾಂಗ್.!


ಪ್ರೇಮಂ ಪೂಜ್ಯಂನತ್ತ ಸ್ಟೂಡೆಂಟ್ಸ್ ಗ್ಯಾಂಗ್.!

 

ಅಪ್ಪಟ ಲವ್‍ಸ್ಟೋರಿಯಾಗಿ ಮೂಡಿಬಂದಿರುವ ಪ್ರೇಮಂ ಪೂಜ್ಯಂ ಚಿತ್ರ ಫ್ಯಾಮಿಲಿ ಆಡಿಯನ್ಸ್ ಮನಗೆದ್ದು ಮುಂದೆ ಸಾಗುತ್ತಿದೆ. ಈಗ ಈ ಚಿತ್ರಕ್ಕೆ ಕಾಲೇಜ್ ಸ್ಟೂಡೆಂಟ್ಸ್ ಫಿದಾ ಆಗಿದ್ದು, ದಿನದಿಂದ ದಿನಕ್ಕೆ ಚಿತ್ರ ವೀಕ್ಷಿಸಲು ಬರುವ ಸ್ಟೂಡೆಂಟ್ಸ್ ಸಂಖ್ಯೆ ಹೆಚ್ಚಾಗುತ್ತಿದೆ.

 

ಪ್ರೇಮ್ ನಾಯಕರಾಗಿರುವ ಈ ಚಿತ್ರವನ್ನು ರಾಘವೇಂದ್ರ ಅವರು ನಿರ್ದೇಶಿಸಿದ್ದು, ವೃತ್ತಿಯಲ್ಲಿ ವೈದ್ಯರಾಗಿರುವ ರಾಘವೇಂದ್ರ ಅವರು ಸಿನಿಮಾ ಮೇಲಿನ ಪ್ರೀತಿಯಿಂದ ಈ ಚಿತ್ರ ನಿರ್ದೇಶಿಸಿದ್ದಾರೆ. ಅವರ ಕನಸಿಗೆ ಅವರ ವೈದ್ಯ ಸ್ನೇಹಿತರೆಲ್ಲಾ ಸೇರಿ ನಿರ್ಮಿಸಿದ್ದಾರೆ. ಚಿತ್ರ ನೋಡಿದವರೆಲ್ಲಾ ನಿರ್ದೇಶಕರಿಗೆ ಫೋನ್‌ ಮಾಡಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರಂತೆ.

ಹಾಗೇಯೆ ಇನ್ನು ಕೆದಂಬಾಡಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಪ್ರೇಮ ಪೂಜ್ಯಂ ಚಿತ್ರಕ್ಕೆ ಡಾ.ರಕ್ಷಿತ್ ಕೆಡಂಬಾಡಿ, ಡಾ.ರಾಜಕುಮಾರ್ ಜಾನಕಿರಾಮನ್, ಮನೋಜ್ ಕೃಷ್ಣನ್ ಬಂಡವಾಳ ಹೂಡಿದ್ದು, ಚಿತ್ರಕ್ಕೆ ಮಾಧವ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನವಿದೆ.