ದೇಶ್‍ಮುಖ್‍ಗೆ ನ್ಯಾಯಾಂಗ ಬಂಧನ ವಿಸ್ತರಣೆ.!


ದೇಶ್‍ಮುಖ್‍ಗೆ ನ್ಯಾಯಾಂಗ ಬಂಧನ ವಿಸ್ತರಣೆ.!

 

ಮುಂಬೈ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ವಿಶೇಷ ನ್ಯಾಯಾಲಯವು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‍ಮುಖ್‍ಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದ್ದು, ಅವರ ಮೇಲೆ ಬಾರ್ ಮಾಲೀಕರಿಂದ ಲಂಚ ಪಡೆದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದ್ದಾರೆ.

 

ಅಕ್ಟೋಬರ್ 29ರಂದು, ಬಾಂಬೆ ಹೈಕೋರ್ಟ್ ಇಡಿಯಿಂದ ಸಮನ್ಸ್ ರದ್ದುಗೊಳಿಸುವಂತೆ ಕೋರಿ ದೇಶಮುಖ್ ಅವರ ಮನವಿಯನ್ನು ತಿರಸ್ಕರಿಸಿತು. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮುಂದೆ ಹಾಜರಾಗುವಂತೆ ತಿಳಿಸಿದ್ದು, ಇಡಿ ತನ್ನ ಕಚೇರಿಯಲ್ಲಿ 12 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ನವೆಂಬರ್ 2ರಂದು ದೇಶಮುಖ್ ಅವರನ್ನು ಬಂಧಿಸಿತು.

ಹಾಗೂ ಇಡಿ ಕಸ್ಟಡಿಯಲ್ಲಿ 14 ದಿನಗಳನ್ನು ಕಳೆದ ನಂತರ, ವಿಶೇಷ ನ್ಯಾಯಾಲಯವು ನವೆಂಬರ್ 15ರಂದು ದೇಶಮುಖ್ ಅವರನ್ನು ನವೆಂಬರ್ 29ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು, ವಿಶೇಷ ನ್ಯಾಯಾಧೀಶರು ದೇಶಮುಖ್ ಅವರ ನ್ಯಾಯಾಂಗ ಬಂಧನವನ್ನು ಡಿಸೆಂಬರ್ 13ರವರೆಗೆ ವಿಸ್ತರಿಸಿದರು ಮತ್ತು ಆರೋಪಿಗಳನ್ನು ಹೇಳಿದ ದಿನಾಂಕಕ್ಕೆ ಹಾಜರುಪಡಿಸಲು ಪ್ರಕರಣವನ್ನು ಮುಂದೂಡಿದ್ದಾರೆ.

ಹಾಗೇಯೆ ದೇಶ್‍ಮುಖ್ ಅವರು ಗೃಹ ಸಚಿವರಾಗಿದ್ದಾಗ ಡಿಸೆಂಬರ್ 2020 ರಿಂದ ಫೆಬ್ರವರಿ 2021ರ ನಡುವೆ ವಜಾಗೊಂಡಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜ್ ಮೂಲಕ ವಿವಿಧ ಆರ್ಕೆಸ್ಟ್ರಾ ಬಾರ್ ಮಾಲೀಕರಿಂದ ಸರಿಸುಮಾರು 4.7 ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ಪಡೆದಿದ್ದಾರೆ ಎಂದು ಇಡಿ ತನಿಖೆ ಹೇಳಿಕೊಂಡಿದ್ದು, ಇಡಿ ಪ್ರಕಾರ, ದೇಶಮುಖ್ ಅವರ ಕುಟುಂಬವು 4.18 ಕೋಟಿ ರೂಪಾಯಿಗಳ ಕಳಂಕಿತ ಮೊತ್ತವನ್ನು ಲಾಂಡರಿಂಗ್ ಮಾಡಿದೆ.