ವಿನೋದ್ ದುವಾ: ಆರೋಗ್ಯ ಸ್ಥಿತಿ ಗಂಭೀರ


ವಿನೋದ್ ದುವಾ: ಆರೋಗ್ಯ ಸ್ಥಿತಿ ಗಂಭೀರ

 

ನವದೆಹಲಿ: ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಹಿರಿಯ ಪತ್ರಕರ್ತ ವಿನೋದ್ ದುವಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.

 

67 ವರ್ಷದ ವಿನೋದ್ ದುವಾ ಅವರು ದೂರದರ್ಶನ ಹಾಗೂ ಎನ್ ಡಿ ಟಿವಿಯಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಹಾಗೂ ಹಿಂದಿ ಪತ್ರೀಕೋದ್ಯಮದಲ್ಲಿ ಅವರು ಹೆಚ್ಚಿನ ಸಾಧನೆ ಮಾಡಿದ್ದು, ತಂದೆಯ ಆರೋಗ್ಯ ಪರಿಸ್ಥಿತಿ ಕುರಿತು ಸ್ಟ್ಯಾಂಡಪ್ ಕಮೀಡಿಯನ್ ಆಗಿ ಜನಪ್ರಿಯತೆ ಪಡೆದಿರುವ ಪುತ್ರಿ ಮಲ್ಲಿಕಾ ದುವಾ ಮಾಹಿತಿ ಹಂಚಿಕೊಂಡಿದ್ದಾರೆ.

ಹಾಗೇಯೆ ವಿನೋದ್ ಅವರು ಈ ವರ್ಷದಾರಂಭದಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಆಸ್ಪತ್ರೆಯಲ್ಲಿ ರೇಡಿಯೊಲಾಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರ ಪತ್ನಿ ಕೊರೊನಾಗೆ ಬಲಿಯಾಗಿದ್ದರು.