ಕೃಷಿಯಲ್ಲಿ ತೊಡಗಿಕೊಳ್ಳುವುದು ಸುಲಭವಲ್ಲ.!


ಕೃಷಿಯಲ್ಲಿ ತೊಡಗಿಕೊಳ್ಳುವುದು ಸುಲಭವಲ್ಲ.!

ಬೆಂಗಳೂರು: ಶ್ರೀಮುರಳಿ ನಾಯಕ ನಟರಾಗಿ ಅಭಿನಯಿಸಿರುವ ಮದಗಜ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಆಶಿಕಾ ರಂಗನಾಥ್ ತಮ್ಮ ಪಾತ್ರದ ಕುರಿತು ಹಂಚಿಕೊಂಡಿದ್ದು, ಮದಗಜ ಸಿನಿಮಾ ಡಿಸೆಂಬರ್ 3ರಂದು ತೆರೆಕಾಣುತ್ತಿದೆ ಎಂದು ಹೇಳಿದ್ದಾರೆ.

 

ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆಶಿಕಾ, ಆ ಪಾತ್ರದಿಂದಾಗಿ ತಮಗೆ ಕೃಷಿಯಲ್ಲಿ ತೊಡಗಿಕೊಳ್ಳುವುದು ಸುಲಭದ ಕೆಲಸ ಅಲ್ಲ ಎಂಬುದು ಅರ್ಥವಾಯಿತು. ಇಂದಿನ ಯುವಪೀಳಿಗೆಗೆ ಸಿನಿಮಾ ಒಳ್ಳೆಯ ಸಂದೇಶ ನೀಡುವುದಾಗಿ ಹೇಳಿದ್ದು, ಮಹೇಶ್ ಕುಮಾರ್ ಅವರು ನಿರ್ದೇಶಿಸಿರುವ ಈ ಸಿನಿಮಾಗೆ ಉಮಾಪತಿ ಅವರು ಹಣ ಹೂಡಿದ್ದಾರೆ ಎಂದು ಹೇಳಿದ್ದಾರೆ.

ಹಾಗೇಯೆ ಮದಗಜ ಸಿನಿಮಾದಲ್ಲಿ ಆಶಿಕಾ ಅವರು ಇದೇ ಮೊದಲ ಬಾರಿಗೆ ಮುರಳಿ ಅವರ ಜೊತೆ ನಾಯಕಿಯಾಗಿ ಅಭಿನಯಿಸಿದ್ದು, ಈ ಸಿನಿಮಾದಲ್ಲಿ ಅವರು ತುಕ್ಕು ಹಿಡಿದ ಹಳೆಯ ಸೈಕಲ್ ಓಡಿಸಿದ್ದಾರೆ, ಟ್ರ್ಯಾಕ್ಟರ್ ಓಡಿಸುವುದನ್ನೂ ಕಲಿತಿರುವುದಲ್ಲದೆ, ಕೊಡಲಿ ಹಿಡಿಯಲು ಕಲಿತಿದ್ದಾರೆ. ಹಾಗೂ ಕೆಸರು ಮಣ್ಣಿನೊಳಗೆ ಕೆಲಸ ಮಾಡುವುದನ್ನು ಕಲಿತಿದ್ದು, ಬೀಜ ಬಿತ್ತನೆ ಮಾಡುವುದು ಸೇರಿದಂತೆ ಗದ್ದೆ ಉಳುವುದನ್ನೂ ಕೂಡಾ ಕಲಿತಿದ್ದಾರೆ.