ಸಂಜಯ್‍ದತ್ ಬ್ರ್ಯಾಂಡ್ ರಾಯಭಾರಿ.!


ಸಂಜಯ್‍ದತ್ ಬ್ರ್ಯಾಂಡ್ ರಾಯಭಾರಿ.!

ಇಟಾನಗರ್: ಅರುಣಾಚಲ ಪ್ರದೇಶದ ಸಂಸ್ಕೃತಿ, ಆಹಾರ ಮತ್ತು ಜನತೆ ವೈಶಿಷ್ಟ್ಯಪೂರ್ಣ ಎಂದು ಬಾಲಿವುಡ್ ನಟ ಸಂಜಯ್‍ದತ್ ಹೇಳಿದ್ದಾರೆ.

 

ಅರುಣಾಚಲ ಸಂಸ್ಥಾಪನೆಯ 50ನೆ ವರ್ಷಾಚರಣೆಯ ಬ್ರ್ಯಾಂಡ್ ರಾಯಭಾರಿಯಾಗಿ ನೇಮಕಗೊಂಡಿರುವ ನಟ ದತ್, ಅರುಣಾಚಲ ಪ್ರದೇಶದ ವೈಶಿಷ್ಟ್ಯವನ್ನು ಹೊರಗಿನ ಜನತೆಗೆ ಬಿಂಬಿಸುವಲ್ಲಿ ಶಕ್ತಿಮೀರಿ ಶ್ರಮಿಸುವುದಾಗಿ ನುಡಿದಿದ್ದಾರೆ.

ಹಾಗೇಯೆ ದತ್ ಅವರು ರಾಜ್ಯದ ಶಿ-ಯೋಲು ಜಿಲ್ಲೆಯ ಮೆಚುಕಾದಲ್ಲಿ ಒಂದು ತಿಂಗಳ ಅವಯ ಸಂಭ್ರಮಾಚರಣೆಯ ಪ್ರಚಾರಕ್ಕೆ ಚಾಲನೆ ನೀಡಿದ್ದು, ಅರುಣಾಚಲ ಪ್ರದೇಶ ರಾಜ್ಯೋದಯದ ಸವಿನೆನಪಿಗಾಗಿ ಈ ಸಂಭ್ರಮಾಚರಣೆ ಮುಂದಿನ ವರ್ಷದ ಜ.20 ರಿಂದ ಫೆ.20ರ ವರೆಗೆ ನಡೆಯಲಿದೆ ಎಂದು ಹೇಳಿದ್ದಾರೆ.