ಸುಧಾರಾಣಿಗೆ ಡಾಕ್ಟರೇಟ್ ಗೌರವ.!


ಸುಧಾರಾಣಿಗೆ ಡಾಕ್ಟರೇಟ್ ಗೌರವ.!

 

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸುಧಾರಾಣಿಯವರಿಗೆ ಕಲಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ನೀಡಲಾಗಿದ್ದು, ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂತೋಷವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

 

ಈ ಕುರಿತು ಮಾತನಾಡಿದ ಸುಧಾರಾಣಿ, ನಿಮ್ಮೆಲ್ಲರೊಂದಿಗೆ ಸಂತೋಷದ ಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಇಂಡಿಯನ್ ಎಂಪೈರ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್‍ನಿಂದ ನನಗೆ ಕಲಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ನೀಡಲಾಗಿದೆ ಎಂದು ಬರೆದುಕೊಂಡು ಡಾಕ್ಟರೇಟ್ ಸ್ವೀಕರಿಸುತ್ತಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಹಾಗೇಯೆ ಸ್ಯಾಂಡಲ್‍ವುಡ್‍ನ ಎವರ್ ಗ್ರೀನ್ ಹೀರೋಯಿನ್ ಸುಧಾರಾಣಿ ಅವರು ಬಾಲ್ಯ ನಟಿಯಾಗಿ ನಟನೆಯನ್ನು ಪ್ರಾರಂಭಿಸಿದ್ದು, ಹಲವಾರು ಜಾಹಿರಾತುಗಳಲ್ಲಿ ಸುಧಾರಾಣಿ ಕಾಣಿಸಿಕೊಂಡಿದ್ದಾರೆ. 12ನೇ ವಯಸ್ಸಿನಲ್ಲಿ ಶಿವರಾಜ್‍ಕುಮಾರ್ ಅವರ ಮೊದಲ ಸಿನಿಮಾ ಆನಂದ್‍ಗೆ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಇವರು ನಟಿಸಿದ ಸಿನಿಮಾಗಳೆಲ್ಲವು ಸೂಪರ್ ಹಿಟ್ ಆಗುತ್ತಿದ್ದವು. ಇವರು ಚಿತ್ರರಂಗಕ್ಕೆ ಕಾಲಿಟ್ಟು 35 ವರ್ಷ ಕಳೆದಿದ್ದರೂ, ಇಂದಿಗೂ ಸಹ ಅಷ್ಟೇ ಬೇಡಿಕೆ ಉಳಿಸಿಕೊಂಡಿದ್ದಾರೆ.